ದಾಂಡೇಲಿ: ನಗರದ ಗಾಂಧಿನಗರದಲ್ಲಿರುವ ಶ್ರೀವಿಘ್ನೇಶ್ವರ ಮಾರುತಿ ಮಂದಿರದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಟ್ರಸ್ಟ್ ಕಮಿಟಿಯ ಆಶ್ರಯದಡಿ 11ನೇ ವರ್ಷದ ವಾರ್ಷಿಕ ವರ್ಧಂತಿ ಉತ್ಸವವು ಸಂಭ್ರಮ, ಸಡಗರ ಹಾಗೂ ವಿಜೃಂಭಣೆಯಿಂದ ಜರುಗಿತು.
ಕೇರಳದ ಬ್ರಹ್ಮಶ್ರೀ ವಾಮನ್ ನಂಬುತ್ರಿ ಇವರ ಘನ ಪೌರೋಹಿತ್ಯದಲ್ಲಿ ಪೂಜಾ ಕರ‍್ಯಕ್ರಮಗಳು ನಡೆಯಿತು. ಇಂದು ಬೆಳಿಗ್ಗೆಯಿಂದಲೆ ವಿವಿಧ ಪೂಜಾರಾಧನೆಗಳು ಆರಂಭಗೊಂಡಿತು. ಶ್ರೀ ಸ್ವಾಮಿಗೆ ಅಭಿಷೇಕ ಮಾಡುವುದರ ಮೂಲಕ ಚಾಲನೆ ನೀಡಲಾದ ಪೂಜಾ ಕಾರ್ಯಕ್ರಮದಲ್ಲಿ ಅಷ್ಟದ್ರಾವಣ ಗಣಪತಿ ಹೋಮ, ಗಣಪತಿ ಹೋಮ, ಕಳಸ ಪೂಜೆ, ಕಳಶಾಭಿಷೇಕ, ಶ್ರೀ.ಆಂಜನೇಯ ಸ್ವಾಮಿಯ ಮಹಾಪೂಜೆ ನಡೆದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಪೂಜಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿ ಶ್ರೀ ಸ್ವಾಮಿಯ ದರ್ಶನವನ್ನು ಪಡೆದು, ಅನ್ನಪ್ರಸಾದವನ್ನು ಸ್ವೀಕರಿಸಿದರು.
ವಾರ್ಷಿಕ ವರ್ದಂತಿ ಉತ್ಸವ ಕರ‍್ಯಕ್ರಮದ ಯಶಸ್ಸಿಗೆ ಶ್ರೀ ಮಹಾಗಣಪತಿ ದೇವಸ್ಥಾನ ಟ್ರಸ್ಟ್ ಕಮೀಟಿಯ ಪದಾಧಿಕಾರಿಗಳು, ಸದಸ್ಯರು, ದೇವಸ್ಥಾನದ ಪ್ರಧಾನ ಅರ್ಚಕರಾದ ಚೇತನ್ ಭಟ್ ಹಾಗೂ ಭಕ್ತಾಭಿಮಾನಿಗಳು ಶ್ರಮಿಸಿದ್ದರು.