Slide
Slide
Slide
previous arrow
next arrow

ಎಲ್ಲಾ ಧರ್ಮಗಳ ಆಶಯ ಒಂದೇ: ಇಫ್ತಿಕಾರ್ ಅಹ್ಮದ್

300x250 AD


ದಾಂಡೇಲಿ: ಈ ಜಗತ್ತಿನ ಎಲ್ಲ ಧರ್ಮಗಳ ಆರಾಧನೆ ಮತ್ತು ಆಚರಣೆ ಹಾಗೂ ಸಂಪ್ರದಾಯದಲ್ಲಿ ವಿವಿಧತೆಯಿರಬಹುದು, ಆದರೆ ಆಶಯ ಒಂದೆ; ಎಲ್ಲ ಧರ್ಮಗಳ ಸಾರ ಒಂದೇ ಆಗಿದೆ. ಸರ್ವಧರ್ಮಿಯರು ಸಹಬಾಳ್ವೆಯಿಂದ ಕೂಡಿ ಬಾಳಿದರೆ ಸದ್ಭಾವನೆಯ ಸಮಾಜ ನಿರ್ಮಾಣ ಸಾಧ್ಯವಾಗುವುದರ ಜೊತೆಗೆ ಆತ್ಮತೃಪ್ತಿ ಪಡೆಯಲು ಸಾಧ್ಯ ಎಂದು ಜಮಾತ್-ಎ ಉಲಮಾದ ಅಧ್ಯಕ್ಷ ಮುಫ್ತಿ ಇಫ್ತಿಕಾರ್ ಅಹ್ಮದ್ ಖಾಸ್ಮಿ ಹೇಳಿದರು.
ಜಮಾತ್-ಎ ಉಲಮಾ ಸಮಿತಿಯ ಆಶ್ರಯದಡಿ ಹಳೆ ನಗರಸಭೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸದ್ಭಾವನಾ ಸಂಸತ್ತು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಾಂಧಿನಗರದ ಚರ್ಚಿನ ಧರ್ಮಗುರು ಫಾದರ್ ಸ್ಟೀಪಾನ್ಜಾ ಹಳೆಲಿಯಾ, ನಿಸರ್ಗದ ಜೀವನ ಕ್ರಮ, ನಿಸರ್ಗದಲ್ಲಿ ಜೀವವೈವಿಧ್ಯತೆಗಳು ಪರಸ್ಪರ ಸೌಹಾರ್ದತೆಯಿಂದ ಬದುಕುವುದನ್ನೆ ನಾವು ನಮ್ಮ ಜೀವನದಲ್ಲಿ ಆಳವಡಿಸಿಕೊಂಡರೇ ಸುಸಂಸ್ಕೃತ ಹಾಗೂ ಶಾಂತಿಯ ಸಮಾಜ ನಿರ್ಮಾಣವಾಗಬಲ್ಲುದು ಎಂದರು.
ಬೈಲಹೊಂಗಲದ ಆರಾದ್ರಿ ಮಠದ ವೇದಮೂರ್ತಿ ಡಾ.ಮಹಂತಯ್ಯ ಸ್ವಾಮೀಜಿ, ನಮ್ಮ ನಮ್ಮಲ್ಲಿ ಒಗ್ಗಟ್ಟು ಇರಬೇಕೆ ವಿನಾ ಒಡಕಿರಬಾರದು. ಜೀವನದಲ್ಲಿ ಉನ್ನತ ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಬೇಕು. ನಮಗೆಲ್ಲರಿಗೂ ಮಹೋನ್ನತ ದೇವರಾದ ತಂದೆ ತಾಯಿಯವರನ್ನು ಜೀವನದುದ್ದಕ್ಕೂ ಅತ್ಯಂತ ಪ್ರೀತಿ, ಗೌರವದಿಂದ ನೋಡಿಕೊಳ್ಳಬೇಕು. ಧರ್ಮ ಧರ್ಮಗಳ ಆಚರಣೆಯಲ್ಲಿ ವಿಭಿನ್ನತೆಯಿದ್ದರೂ ವಿಚಾರದಲ್ಲಿ ಒಮ್ಮತವಿರಬೇಕು. ಸರ್ವಧರ್ಮಿಯರು ಸಹಬಾಳ್ವೆಯಿಂದ ಜೀವನ ನಡೆಸಬೇಕೆಂದು ಕರೆ ನೀಡಿದರು.
ಹಳೆದಾಂಡೇಲಿ ಸೈಂಟ್ ಅಂತೋನಿ ಚರ್ಚಿನ ಧರ್ಮಗುರುಗಳಾದ ಫಾದರ್ ಪೆಲಿಕ್ಸ್ ಲೋಬೋ, ನಾಜೀಮೆ ಜಮಾತ್ ಉಲಮಾ ಇದರ ಹಫೀಜ್ ಆಸೀಮ್ ಅಬ್ದುಲ್ಲಾ ಸಾಹೇಬ್ ಹಾಗೂ ಪತ್ರಕರ್ತ ಯು.ಎಸ್.ಪಾಟೀಲ್ ಮೊದಲಾದವರು ಸರ್ವಧರ್ಮ ಸಮನ್ವಯತೆಯ ಬದುಕು ನಮ್ಮೆಲ್ಲರದ್ದಾಗಲೆಂದು ಶುಭ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರನ್ನು ಸನ್ಮಾನಿಸಲಾಯ್ತು. ಜಮಾತ್-ಎ ಉಲಮಾ ಜಿಲ್ಲಾಧ್ಯಕ್ಷ ಮುಫ್ತಿ ಫಯಾಜ್ ಅಹಮ್ಮದ್ ಸಾಹಬ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಇಸ್ಮಾಯಿಲ್ ತಂಗಳ್ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಹಫೀಜ್ ಅಖಾಲಾಕ್ ಸಾಹಬ್ ವಂದಿಸಿದರು. ಸೈಯದ್ ಇಸ್ಮಾಯಿಲ್ ತಂಗಳ್, ಮೌಲಾನಾ ಸಲೀಂ ಇನಾಮಿ ಮತ್ತು ಅಬ್ದುಲ್ ರೆಹಮಾನ್ ಕಾರ್ಯಕ್ರಮ ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top