ಶಿರಸಿ: ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ಗಾಯನಾಚಾರ್ಯ ಪದ್ಮಭೂಷಣ ಪಂ. ಡಾ.ಬಸವರಾಜ್ ರಾಜಗುರು ಮತ್ತು ಪಂ. ಚಂದ್ರಶೇಖರ ಪುರಾಣಿಕ ಮಠ ಅವರ ಸ್ಮರಣಾರ್ಥ ನ. 15 ರಂದು ಉದಯರಾಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಾಂತಾರಾಮ ಕನೇನಹಳ್ಳಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮೊದಲು ಶಾಸ್ತ್ರೀಯ ಸಂಗೀತವನ್ನ ಹಾಡಿ ನಂತರ “ತುಂಗಾ ತೀರದಿ ರಾಜಂ ಭಜಮನ” ಎಂಬ ಭಜನೆ ಮೂಲಕ ತಮ್ಮ ಗಾಯನ ಕಲೆಯನ್ನು ಪ್ರೇಕ್ಷಕರಿಗೆ ಅತ್ಯದ್ಭುತವಾಗಿ ಉಣ ಬಡಿಸಿದರು.
ಅವರಿಗೆ ತಬಲಾ ಸಾಥ್ ರಾಮದಾಸ್ ಭಟ್ಟ್ ಮತ್ತು ಸಂವಾದಿನಿ ಅಜಯ್ ಹೆಗಡೆ ವರ್ಗಾಸರ ನೀಡಿದರು. ಪ್ರಾಚಾರ್ಯ ಡಾ.ಟಿ.ಎಸ್ ಹಳೇಮನೆ ಉಪಸ್ಥಿತರಿದ್ದರು. ಮತ್ತು ನೃತ್ಯ ವಿಭಾಗದ ಮುಖ್ಯಸ್ಥರಾದ ಕೃಷ್ಣಮೂರ್ತಿ ಭಟ್ ಸ್ವಾಗತಿಸಿದರು.