ಭಟ್ಕಳ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ ಎಂಬ ಪರಿಕಲ್ಪನೆಯ ನವಂಬರ ತಿಂಗಳಿಡೀ ಸಾಹಿತ್ಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ತಾಲೂಕು ಕಸಾಪದಿಂದ ಕನ್ನಡ ನಾಡು ನುಡಿಗೆ ಸಂಬಂಧಿಸಿದ ಸಮೂಹ ಗೀತ ಗಾಯನ ಸ್ಪರ್ಧೆಯು ಇಲ್ಲಿನ ಚಿತ್ರಾಪುರದ ಶ್ರೀವಲಿ ಪ್ರೌಢಶಾಲೆಯಲ್ಲಿ ನಡೆಯಿತು.
ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಆಶಯ ನುಡಿಗಳನ್ನಾಡಿದರು. ಮುಖ್ಯಾಧ್ಯಾಪಕಿ ಮಮತಾ ಭಟ್ಕಳ ಎಲ್ಲರನ್ನು ಸ್ವಾಗತಿಸಿದರು. ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಪಿ.ಭಂಡಾರಿ ಸ್ಪರ್ಧಾ ವಿಜೇತರನ್ನು ಘೋಷಿಸಿ ಅಭಿನಂದಿಸಿದರು.
ಶಾಲೆಯ ಆರು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಹತ್ತನೇ ತರಗತಿಯ ಸಂಜನಾ ಸಂಗಡಿಗರು ಪ್ರಥಮ, ಒಂಭತ್ತನೇ ತರಗತಿಯ ಪೂರ್ಣಿಮಾ ಸಂಗಡಿಗರು ದ್ವಿತೀಯ ಹಾಗೂ ಎಂಟನೇ ತರಗತಿಯ ಸಚಿನ್ ಸಂಗಡಿಗರು ತೃತೀಯ ಬಹುಮಾನ ಪಡೆದುಕೊಂಡರು. ವಿಜೇತರಿಗೆ ಪ್ರಶಂಸನಾ ಪತ್ರದೊಂದಿಗೆ ಸಾಹಿತಿ ಡಾ.ಆರ್.ವಿ.ಸರಾಫ್ ರಚಿಸಿದ ಪುಸ್ತಕಗಳನ್ನು ಬಹುಮಾನವಾಗಿ ನಿಡಲಾಯಿತು. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಅಶೋಕ ನಾಯ್ಕ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ವಾಸುದೇವ ಪೂಜಾರಿ ಕಸಾಪ ಗೌರವ ಕಾರ್ಯದರ್ಶಿ ನಾರಾಯಣ ನಾಯ್ಕ, ಶಿಕ್ಷಕರಾದ ಸಂಜಯ ಗುಡಿಗಾರ, ಶಿವಾನಂದ ಮೊಗೇರ, ಶ್ರೀಧರ ನಾಯ್ಕ, ಕಾಂಚನಾ ಮೇಸ್ತ, ರಮ್ಯಾ ನಾಯ್ಕ, ಮಮತಾ ಮೊಗೇರ, ತ್ರಿವೇಣಿ ನಾಯ್ಕ, ಶಾಲಾ ಕಚೇರಿ ಅಧೀಕ್ಷಕ ವಿನಾಯಕ ಚಿತ್ರಾಪುರ, ಸಂತೋಷ ಚಿತ್ರಾಪುರ ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವಿದಾರ್ಥಿಗಳಿಗೆ ಸಿಹಿ ವಿತರಿಸಲಾಯಿತು. ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಹಾಗೂ ಎಂ.ಪಿ.ಭಂಡಾರಿ ಗಾಯನ ಸ್ಪರ್ಧೆಯ ನಿರ್ಣಾಯರಾಗಿ ಕಾರ್ಯನಿರ್ವಹಿಸಿದರು.