ಲಂಡನ್: ಬ್ರಿಟನ್ ಪ್ರಧಾನಿ ಹುದ್ದೆಗೆ ಲಿಜ್ ಟ್ರಸ್ ಅವರು ನಿನ್ನೆ ರಾಜೀನಾಮೆ ನೀಡಿದ್ದು, ಇದು ಅಲ್ಲಿ ಮತ್ತೊಂದು ಸುತ್ತಿನ ನಾಯಕತ್ವಕ್ಕಾಗಿನ ರೇಸ್ ಅನ್ನು ಹುಟ್ಟು ಹಾಕಿದೆ , ಕೇವಲ ನಾಲ್ಕು ತಿಂಗಳಲ್ಲಿ ಎರಡನೆಯ ಬಾರಿಗೆ ಅಲ್ಲಿ ಪ್ರಧಾನಿಗಳ ರಾಜೀನಾಮೆ ನಡೆದಿದೆ.
ಕೇವಲ 45 ದಿನಗಳ ಅಧಿಕಾರದ ನಂತರ ಹುದ್ದೆ ತ್ಯಜಿಸಿದ ಟ್ರಸ್, ಮುಂದಿನ ವಾರದ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಾಯಕತ್ವ ಸ್ಪರ್ಧೆಯಲ್ಲಿ ತನ್ನ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದ್ದಾರೆ. ಪಕ್ಷದ ನಾಯಕತ್ವದ ಸವಾಲುಗಳನ್ನು ನೋಡಿಕೊಳ್ಳುವ ಹಿರಿಯ ಕನ್ಸರ್ವೇಟಿವ್ ಶಾಸಕ ಗ್ರಹಾಂ ಬ್ರಾಡಿ, ಪ್ರತಿ ಅಭ್ಯರ್ಥಿಯು ಸ್ಪರ್ಧಿಸಲು ಶಾಸಕರಿಂದ 100 ನಾಮನಿರ್ದೇಶನಗಳನ್ನು ಪಡೆಯಬೇಕು ಮತ್ತು ಮುಂದಿನ ಶುಕ್ರವಾರದ ವೇಳೆಗೆ ಸ್ಪರ್ಧೆ ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು.
ಯುಕೆಯ ಮಾಜಿ ಹಣಕಾಸು ಸಚಿವ ರಿಷಿ ಸುನಕ್, ಮಾಜಿ ಕ್ಯಾಬಿನೆಟ್ ಸಚಿವ ಪೆನ್ನಿ ಮೊರ್ಡಾಂಟ್ ಮತ್ತು ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್ ಅವರು ಉನ್ನತ ಹುದ್ದೆಗೆ ವಿಶ್ವಾಸಾರ್ಹ ಸ್ಪರ್ಧಿಗಳೆಂದು ಪರಿಗಣಿಸಲ್ಪಟ್ಟಿದ್ದಾರೆ. ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಕೂಡ ಸ್ಪರ್ಧೆಗೆ ಹಿಂತಿರುಗಬಹುದು.
ಯಾರು ಗೆಲ್ಲುತ್ತಾರೋ ಅವರು ಅಲ್ಲಿನ ಆರು ವರ್ಷಗಳಲ್ಲಿನ ಐದನೇ ಬ್ರಿಟಿಷ್ ಪ್ರಧಾನಿಯಾಗುತ್ತಾರೆ.
ಕೃಪೆ: http://news13.in