ಬೆಂಗಳೂರು : ಹಲಾಲ್ ಇಂದು ಕೇವಲ ಮಾಂಸಕ್ಕಾಗಿ ಸೀಮಿತವಾಗಿರದೇ, ಧಾನ್ಯಗಳು, ಹಣ್ಣು ಹಂಪಲುಗಳು, ಸೌಂದರ್ಯ ಪ್ರಸಾಧನಗಳು, ಔಷಧಿಗಳು ಮುಂತಾದ ಅನೇಕ ಉತ್ಪಾದನೆಗಳು ಹಲಾಲ್ ಪ್ರಮಾಣೀಕೃತವಾಗಿರಬೇಕು ಎಂದು ಹಿಂದೂ ವ್ಯಾಪಾರಿಗಳಿಗೆ ಕಡ್ಡಾಯ ಮಾಡಲಾಗುತ್ತಿದೆ. ಹಲಾಲ್ ಪ್ರಮಾಣ ಪತ್ರದ ಹೆಸರಿನಲ್ಲಿ ದೇಶಾದ್ಯಂತ ಹಿಂದೂ ವ್ಯಾಪಾರಿಗಳಿಂದ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಲಾಗುತ್ತಿದೆ. ರಾಜ್ಯದಾದ್ಯಂತ ಈ ಹಲಾಲ್ ಕುರಿತು ಜಾಗೃತಿ ಮೂಡಿಸಲ ಅ.16,ಭಾನುವಾರದಂದು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕೆ.ಆರ್.ಜಿ ಹಾಲ್, ಭಾರತೀಯ ವಿದ್ಯಾ ಭವನದಲ್ಲಿ ಸಂಜೆ 5. ಗಂಟೆಗೆ ‘ಹಲಾಲ್ ವಿರೋಧಿ ಸಮ್ಮೇಳನ’ ಹಾಗೂ ‘ಹಲಾಲ್ ಜಿಹಾದ್ ?’ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಭಾರತದ ಸಂವಿಧಾನದ ಪ್ರಕಾರ, ಆಹಾರ ಸುರಕ್ಷೆ ಮತ್ತು ಮಾನದಂಡ ಪ್ರಾಧಿಕರಣ(FSSAI) ಈ ಅಧಿಕೃತ ಸಂಸ್ಥೆಯಿಂದ ಪ್ರಮಾಣ ಪತ್ರ ಪಡೆದಿದ್ದರೂ ಕೂಡ ಖಾಸಗಿ ಮುಸಲ್ಮಾನ ಸಂಸ್ಥೆಗಳಿಂದ ಹಲಾಲ್ ಪ್ರಮಾಣ ಪತ್ರ ಪಡೆಯಬೇಕಾಗುತ್ತದೆ. ಒಟ್ಟಾರೆ ಭಾರತದ ಅರ್ಥವ್ಯವಸ್ಥೆಯ ಮೇಲೆ ದಾಳಿ ನಡೆಸಿ ಅರ್ಥ ವ್ಯವಸ್ಥೆ ದುರ್ಬಲಗೊಳಿಸುವ ಯೋಜನಾ ಬದ್ಧ ಪ್ರಯತ್ನ ಹಲಾಲನ ಮೂಲಕ ಮಾಡಲಾಗುತ್ತಿದೆ. ಹಿಂದೂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಈ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕರೆ ನೀಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಯುವಾ ಬ್ರಿಗೇಡ್ ನ ಸಂಸ್ಥಾಪಕ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ, ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲ ಕಿರಣ್ ಬೆಟ್ಟದಾಪುರ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ್ ಶಿಂದೆ, ಹಿಂದೂ ಹೆಲ್ಪ್ ಲೈನ್ ನ ರಾಷ್ಟ್ರೀಯ ಅಧ್ಯಕ್ಷ ಟಿ. ವಿಜಯ ಕುಮಾರ ರೆಡ್ಡಿ, ಉದ್ಯಮಿಗಳಾದ ಡಿ.ಎಸ್. ರಾಘವೇಂದ್ರ, ವಿಶ್ವ ಸನಾತನ ಪರಿಷದ್ ನ ಅಧ್ಯಕ್ಷ. ಎಸ್. ಭಾಸ್ಕರನ್, ಹಿಂದವೀ ಜಟ್ಕಾ ಮೀಟ್ ನ ಸಂಸ್ಥಾಪಕ. ಮುನೇ ಗೌಡ, ಬೆಂಗಳೂರು ಉಚ್ಚ ನ್ಯಾಯಾಲಯದ ವಕೀಲರಾದ ಅಮೃತೇಶ್ ಎನ್.ಪಿ, ಶ್ರೀರಾಮಸೇನೆಯ ಬೆಂಗಳೂರು ಜಿಲ್ಲಾಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಇನ್ನೂ ಅನೇಕ ಗಣ್ಯರ ಗೌರವಾನ್ವಿತ ಉಪಸ್ಥಿತಿ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.