Slide
Slide
Slide
previous arrow
next arrow

ಜಿಲ್ಲೆಯ ಬಿಜೆಪಿ ಶಾಸಕರು ತಕ್ಷಣ ರಾಜೀನಾಮೆ ನೀಡಬೇಕು: ವಸಂತ ನಾಯ್ಕ

300x250 AD

ಸಿದ್ದಾಪುರ: ಸರ್ಕಾರದ ಆಸ್ತಿ ಹಾನಿಮಾಡಿ, ಸಮಾಜದಲ್ಲಿನ ಸೌಹಾರ್ದತೆಯನ್ನು ಹಾಳುಮಾಡಿ ಕೋಮು ಗಲಭೆ ಎಬ್ಬಿಸಿ ರಾಜಕೀಯ ಬೆಳೆ ಬೇಯಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಸಂಸದರಾದ ಅನಂತಕುಮಾರ ಹೆಗಡೆ ಸೇರಿದಂತೆ ವಿಶ್ವೇಶ್ವರ ಹೆಗಡೆ ಕಾಗೇರಿ, ದಿನಕರ ಶೆಟ್ಟಿ ಸೇರಿದಂತೆ ಜಿಲ್ಲೆಯಲ್ಲಿರುವ ಎಲ್ಲಾ ಬಿಜೆಪಿ ಶಾಸಕರು ನೈತಿಕತೆ ಹೊತ್ತು ತಕ್ಷಣ ರಾಜಿನಾಮೆ ಕೊಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನ್ಮನೆ ಆಗ್ರಹಿಸಿದ್ದಾರೆ.

ಇವರ ಎಲ್ಲಾ ನಾಟಕಗಳು ಜನರಿಗೆ ಗೊತ್ತಾಗಿದೆ. ಈ ನಿಟ್ಟಿನಲ್ಲಿ ಆತ್ಮಸಾಕ್ಷಿ ಇದ್ರೆ ಇಂದೇ ರಾಜಿನಾಮೆ ಕೊಡಬೇಕು.ಕಳೆದ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹೊನ್ನಾವರದ ಪರೇಶ್ ಮೇಸ್ತ ಎಂಬ ಯುವಕನ ಆಕಸ್ಮಿಕ ಸಾವಿನ ಪ್ರಕರಣಕ್ಕೆ ಹಲವಾರು ರೀತಿಯ ಬಣ್ಣ ಹಚ್ಚಿದರು. ಸಮಾಜದಲ್ಲಿ ಧರ್ಮಗಳ ನಡುವೆ ದೊಡ್ಡ ಮಟ್ಟದ ದ್ವೇಷ ಹಬ್ಬಿಸಿ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಹಾಳುಮಾಡಿದ ಬಿಜೆಪಿ ಮತ್ತು ಸಂಘಪರಿವಾರವು ಮಾಡಿದೆ. ಹಿಂದಿನ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಯಶಸ್ಸನ್ನ ಖಂಡಿತ್ತು. ಈಗ ಸಿಬಿಐ ತನಿಖಾತಂಡವು ಆಕಸ್ಮಿಕ ಸಾವು ಎಂದು ವರದಿಯನ್ನು ಸಲ್ಲಿಸಿದೆ. ಅಮಾಯಕಯುವಕರ ಸಾವಿನಲ್ಲಿ ಮತ್ತು ಸಾವಿನ ಮನೆಯಲ್ಲಿ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿರುವ ಈ ಬಿಜೆಪಿ ನಾಯಕರಿಗೆ ಸಾಮೂಹಿಕ ಬಹಿಷ್ಕಾರ ಹಾಕಬೇಕು.

ಅಧಿಕಾರದ ಮದಏರಿ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುತ್ತಿರುವ ಬಿಜೆಪಿಯನ್ನು ಯುವ ಸಮುದಾಯಯಾವುದೇ ಮುಲಾಜಿಲ್ಲದೆ ತಿರಸ್ಕರಿಸುವ ನಿಟ್ಟಿನಲ್ಲಿ ಶಾಂತಿಯುತ ಸಮಾಜವನ್ನು ಬಯಸುವ ನಿಟ್ಟಿನಲ್ಲಿ ಸನ್ನದ್ಧರಾಗಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆಯಾಗಬೇಕು ಎಂದಿರುವ ಕೆ.ಎಸ್. ಈಶ್ವರಪ್ಪನವರಿಗೆ ನೈತಿಕತೆ ಅನ್ನೋದೇನಾದ್ರು ಇದ್ರೆ ಕಾಂಟ್ರಾಕ್ಟರ್ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಮರು ತನಿಖೆ ಮಾಡಬೇಕು. ಪರ್ಸಂಟೇಜ್ ಆರೋಪದ ವಿಚಾರವಾಗಿಯೂ ಕೆಲವೊಂದಿಷ್ಟು ಮರು ತನಿಖೆ ಮಾಡಬೇಕು, ಯಾಕೆಂದರೆ ಜೈಲಿನಲ್ಲಿ ಕೊಲೆಗಡುಕರಿಗೆ ಬಿರಿಯಾನಿ ನೀಡಿ ವಿಡಿಯೋ ಮಾಡಿಸುವ ಬಿಜೆಪಿ ಸರ್ಕಾರದ ಎಲ್ಲ ಹುಳುಕುಗಳು ಜನರಿಗೆ ಗೊತ್ತಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD

ಪರೇಶ್ ಮೇಸ್ತ ಸಾವಿನ ನಂತರ ಜಿಲ್ಲಾದ್ಯಂತ ನಡೆದ ಗಲಭೆಯ ಬಗ್ಗೆ ಒಟ್ಟು 67 ಪ್ರಕರಣಗಳು ದಾಖಲಾಗಿದ್ದವು, ಜಿಲ್ಲಾದ್ಯಂತ 2082 ಜನರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿತ್ತು, 361 ಜನರನ್ನು ಬಂಧಿಸಿ 272 ಜನರ ವಿರುದ್ಧ ರೌಡಿ ಶೀಟರ್ ಆರೋಪ ಹೊರಿಸಲಾಗಿತ್ತು, 1699 ಜನರ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿತ್ತು, ಒಟ್ಟು 54 ಪ್ರಕರಣಗಳಿಗೆ ಸಂಬಂಧಿಸಿದಂತೆ ಪೋಲಿಸರು ಇದುವರೆಗೆ ಚಾರ್ಜಶೀಟ್ ಸಲ್ಲಿಸಿದ್ದಾರೆ. ಈ ಎಲ್ಲದಕ್ಕೂ ಬಿಜೆಪಿ ಕಾರಣ. ಅಮಾಯಕ ಯುವಕರು ಮತ್ತು ಅವರ ಮನೆಯವರು ಕೋರ್ಟ್ಗೆ ಅಲೆಯುವಂತೆ ಮಾಡಿರುವ ಈ ಬಿಜೆಪಿ ನಾಯಕರು ಸಾರ್ವಜನಿಕವಾಗಿ ಕ್ಷಮೆಯಾಚಿಸಿ ರಾಜೀನಾಮೆ ಕೊಡಬೇಕು.

· ವಸಂತ ನಾಯ್ಕ

Share This
300x250 AD
300x250 AD
300x250 AD
Back to top