Slide
Slide
Slide
previous arrow
next arrow

ಪುರಸಭೆ ಸಾಮಾನ್ಯ ಸಭೆ: ಸಿಸಿಟಿವಿ ಕ್ಯಾಮೆರಾ ದುರಸ್ತಿಗೆ ಸದಸ್ಯರ ಆಗ್ರಹ

300x250 AD

ಭಟ್ಕಳ: ಪುರಸಭೆ ವ್ಯಾಪ್ತಿಯಲ್ಲಿ ಹೊಸದಾಗಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಪುರಸಭಾ ಸದಸ್ಯರು, ಈ ಹಿಂದೆ ಅಳವಡಿಸಿದ ಕ್ಯಾಮೆರಾವನ್ನು ದುರಸ್ಥಿ ಮಾಡಿಕೊಡುವಂತೆ ಗುರುವಾರ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಗ್ರಹಿಸಿದರು.

ಸದಸ್ಯ ಕೃಷ್ಣಾ ನಂದ ಪೈ, ಉಪಾಧ್ಯಕ್ಷ ಕೈಸರ ಮಾತನಾಡಿ, ಈ ಹಿಂದೆ 28 ಲಕ್ಷ ವೆಚ್ಚದಲ್ಲಿ ಪುರಸಭೆಯಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಆದರೆ ಅದರ ನಿರ್ವಹಣೆಯಿಲ್ಲದೇ ಎಲ್ಲವೂ ಕೆಟ್ಟು ನಿಂತಿದೆ. ಈಗ ಪುನಃ ಹೊಸ ಕ್ಯಾಮೆರಾ ಅಳವಡಿಸಿದರೆ ಇದೇ ಗತಿ ಆಗುತ್ತದೆ ಎಂದರು.

ಸದಸ್ಯ ಶ್ರೀಕಾಂತ ನಾಯ್ಕ ಮಾತನಾಡಿ, ಸಿಸಿಟಿವಿ ಕ್ಯಾಮೆರಾ ಅಳವಡಿಸಿವುದರಿಂದ ಪೊಲೀಸರಿಗಿಂತ ನಮಗೆ ಹೆಚ್ಚು ಅನುಕೂಲ. ಅಪರಾಧ ಪತ್ತೆಗೆ ಇದು ಸಹಕಾರಿ. ಒಳ್ಳೆಯ ಕೆಲಸಕ್ಕೆ ನಾವು ಸಹಕಾರ ನೀಡಬೇಕು ಎಂದರು. ಹಾಗಾದರೆ ಮೊದಲು ಹಳೆಯ ಸಿಸಿಟಿವಿ ಕ್ಯಾಮೆರಾವನ್ನು ದುರಸ್ಥಿ ಮಾಡಿಸಿ ಕೊಡೋಣ. ಹಾಗೆಯೇ ಅದರ ನಿರ್ವಹಣೆಯ ಬಗ್ಗೆಯೂ ಕ್ರಮ ವಹಿಸೋಣ ಎಂದು ಎಲ್ಲಾ ಸದಸ್ಯರು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಾಧಿಕಾರಿ ಎಂ.ಕೆ.ಸುರೇಶ, ಜಿಲ್ಲೆಯ ಬೇರೆ ತಾಲ್ಲೂಕುಗಳಲ್ಲಿ ಸಿಸಿಟಿವಿ ಕ್ಯಾಮೆರಾ ನಿರ್ವಹಣೆ ಪುರಸಭೆಯಿಂದಲೇ ಮಾಡುತ್ತಿದ್ದಾರೆ. ಇಲ್ಲಿಯೂ ಪುರಸಭೆಯಿಂದ ನಿರ್ವಹಿಸಲಾಗುವುದು ಎಂದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಅಧ್ಯಕ್ಷ ಪರ್ವೇಜ ಕಾಶಿಂಜೀ, ಹಳೆ ಕ್ಯಾಮೆರಾ ದುರಸ್ಥಿಗೆ ಯೋಜನೆ ಸಿದ್ಧಪಡಿಸಲಾಗುವುದು ಎಂದರು.

300x250 AD

ಉಚಿತವಾಗಿ ಕೋಳಿ ತ್ಯಾಜ್ಯ ಸಂಗ್ರಹಣೆ ಮಾಡಲು ಖಾಸಗಿ ವ್ಯಕ್ತಿ ಅರ್ಜಿ ಸಲ್ಲಿಸಿದರೂ ಪುರಸಭೆ ಇನ್ನೂ ತನಕ ಅವರಿಗೆ ನೀಡದಿರುವ ಬಗ್ಗೆ ಸದಸ್ಯ ಶ್ರೀಕಾಂತ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು. ಈಗ ಕೋಳಿ ತ್ಯಾಜ್ಯ ಸಂಗ್ರಹ ಮಾಡುವ ಕಂಪೆನಿಯವರಿಗೆ 50 ಸಾವಿರ ನೀಡಲಾಗುತ್ತದೆ. ಜೊತೆಗೆ ಎರಡು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಈಗ ಬಂದಿರುವ ವ್ಯಕ್ತಿ ಉಚಿತವಾಗಿ ತ್ಯಾಜ್ಯ ಸಂಗ್ರಹ ಮಾಡುವುದಾಗಿ ತಿಳಿಸಿದ್ದಾರೆ. ಆದರೂ ಏಕೆ ಮೀನಮೇಷ ಎಂದು ಪ್ರಶ್ನಿಸಿದರು. ಇದರಿಂದ ಪುರಸಭೆ ಲಾಭವಲ್ಲವೇ ಎಂದು ಕೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷ ಪರ್ವೇಜ್ ಕಾಂಶೀ0ಜೀ, ಈಗಾಗಲೇ ಈ ಬಗ್ಗೆ ಪತ್ರಿಕೆ ಪ್ರಕಟಣೆ ಮಾಡಿ ಅರ್ಜಿ ಆಹ್ವಾನಿಸಲಾಗಿತ್ತು. ಕೇವಲ ಒಬ್ಬರು ಮಾತ್ರ ತ್ಯಾಜ್ಯ ಸಂಗ್ರಹಣೆಗೆ ಆಸಕ್ತಿ ವಹಿಸಿ ಅರ್ಜಿ ಸಲ್ಲಿಸಿದ್ದಾರೆ. ಶರತ್ತು ವಿಧಿಸಿ ಅವರಿಗೆ ತ್ಯಾಜ್ಯ ಸಂಗ್ರಹಕ್ಕೆ ಅವಕಾಶ ನೀಡಲಾಗುವುದು ಎಂದರು. ಬೀದಿ ದೀಪ ನಿರ್ವಹಣೆ, ರಸ್ತೆಗೆ ಅಡ್ಡಲಾಗಿ ಚಾಚಿಕೊಡಿರುವ ಮರಗಳನ್ನು ಕತ್ತರಿಸುವುದು. ನೆರೆಹಾವಳಿಯಿಂದ ಹಾನಿಗೀಡಾದ ಚರಂಡಿ ಹಾಗೂ ರಸ್ತೆ ರಿಪೇರಿಯ ಬಗ್ಗೆ ಸದಸ್ಯರು ಚರ್ಚಿಸಿ ಅನುದನಾ ನೀಡುವಂತೆ ಆಗ್ರಹಿಸಿದರು. ಬಂದರ ರಸ್ತೆಯಲ್ಲಿ ಬೀದಿದೀಪ ಇರದ ಕಾರಣ ಕತ್ತಲೆ ಇದ್ದು, ಪಿಡಬ್ಲೂಡಿ ಇಲಾಖೆಗೆ ಪುರಸಭೆಯಿಂದ ಪತ್ರ ಬರೆದು ಬೀದಿ ದೀಪ ಅಳವಡಿಸುಂತೆ ಸೂಚಿಸಲು ಸದಸ್ಯ ಶ್ರೀಕಾಂತ ನಾಯ್ಕ ಆಗ್ರಹಿಸಿದರು.

ಉಪಾಧ್ಯಕ್ಷ ಕೈಸರ್, ಸ್ಥಾಯಿ ಸಮಿತಿ ಅಧ್ಯಕ್ಷ ಇಂಸಾದ್, ಯೋಜನಾಧಿಕಾರಿ ವೇಣುಗೋಪಾಲ ಶಾಸ್ತ್ರೀ ಮುಂತಾದವರು ಇದ್ದರು.

Share This
300x250 AD
300x250 AD
300x250 AD
Back to top