ಕುಮಟಾ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರ ಭಾರತ್ ಜೋಡೋ ಪಾದಯಾತ್ರೆ ಕರ್ನಾಟಕಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಬೈಕ್ ರ‍್ಯಾಲಿ ನಡೆಸಲಾಯಿತು.
ಪಟ್ಟಣದ ಹೆಗಡೆ ಕ್ರಾಸ್‌ನಲ್ಲಿ ಜಮಾಯಿಸಿದ ಕುಮಟಾ ಬ್ಲಾಕ್ ಕಾಂಗ್ರೆಸ್‌ನ ಮುಖಂಡರು, ಕಾರ್ಯಕರ್ತರು ಅಲ್ಲಿಂದ ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು. ಮಾಸ್ತಿಕಟ್ಟೆ ಸರ್ಕಲ್, ಗಿಬ್ ಸರ್ಕಲ್, ಸುಭಾಸ್ ರಸ್ತೆ, ಬಸ್ತಿಪೇಟೆ ಮಾರ್ಗವಾಗಿ ಸಂಚರಿಸಿ, ಕುಮಟಾ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಮಾಪ್ತಿಗೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕಿ ಶಾರದಾ ಶೆಟ್ಟಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೊ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಅವರ ಪಾದಯಾತ್ರೆ ಕರ್ನಾಟಕಕ್ಕೆ ಪ್ರವೇಶಿಸಲಿದೆ. ಭಾರತದ ಸಮಗ್ರ ಅಭಿವೃದ್ಧಿಗಾಗಿ ಈ ಪಾದ ಯಾತ್ರೆಯನ್ನು ಹಮ್ಮಿಕೊಂಡ ರಾಹುಲ್ ಗಾಂಧಿ ಅವರು ದೇಶವನ್ನು ಜೋಡಿಸುವ ಕಾರ್ಯ ಮಾಡುತ್ತಿದ್ದಾರೆ. ಜಾತ್ಯಾತೀತ ರಾಷ್ಟ್ರವಾದ ಭಾರತದಲ್ಲಿ ಎಲ್ಲ ಧರ್ಮಿಯರು ಕೂಡಿ ಬಾಳಬೇಕೆಂಬ ಸದುದ್ದೇಶ ಫಲಿಸಬೇಕೆಂಬುವುದು ಅವರ ಇಚ್ಛೆ. ಕಾಂಗ್ರೆಸ್‌ನ ಮುಖಂಡರಾದ ನೆಹರುಗಾಂಧಿ, ರಾಜೀವ್ ಗಾಂಧಿ, ಇಂದಿರಾಗಾಂಧಿಯವರ ಕೊಡುಗೆ ಈ ದೇಶಕ್ಕೆ ಸಾಕಷ್ಟಿದೆ. ಉಳುವವನೇ ಭೂಮಿಯ ಒಡೆಯ ಕಾಯ್ದೆಯಿಂದಲೇ ಬಹುತೇಕ ರೈತರಿಗೆ ಭೂಮಿ ದೊರೆಯುವಂತಾಯಿತು. ದೇಶದ ಆರ್ಥಿಕ ಮಟ್ಟದ ಸುಧಾರಣೆಯಾಯಿತು. ಬಡ, ಮಧ್ಯಮ ವರ್ಗಗಳ ಜನರು ಸ್ವಂತ ಜಮೀನು ಹೊಂದುವAತಾಯಿತು. ಅವರ ಮಾರ್ಗದಲ್ಲಿಯೇ ನಡೆಯುತ್ತಿರುವ ರಾಹುಲ್ ಗಾಂಧಿ ಅವರು ದೇಶದ ಅಭಿವೃದ್ಧಿಗಾಗಿ 3720 ಕಿಮೀ ವರೆಗಿನ ಪಾದ ಯಾತ್ರೆ ಹಮ್ಮಿಕೊಳ್ಳುವ ಮೂಲಕ ಹೋರಾಟ ನಡೆಸಿದ್ದಾರೆ. ಅವರ ಹೋರಾಟ ಯಶಸ್ವಿಯಾಗಲಿ ಎಂದು ಹಾರೈಸಿದರು.
ಬೈಕ್ ರ‍್ಯಾಲಿ ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ಎಲ್ ನಾಯ್ಕ, ಪ್ರಮುಖರಾದ ಮಂಜುನಾಥ ಎಲ್ ನಾಯ್ಕ, ರತ್ನಾಕರ ನಾಯ್ಕ, ರವಿಕುಮಾರ ಶೆಟ್ಟಿ, ನಾಗೇಶ ನಾಯ್ಕ, ಮುಜಾಫರ್ ಶೇಖ್, ಸಚೀನ ನಾಯ್ಕ, ಕೃಷ್ಣಾನಂದ ವೆರ್ಣೇಕರ್, ಬಾಬು ನಾಯ್ಕ, ವೀಣಾ ನಾಯಕ, ಸುರೇಖಾ ವಾರೇಕರ್, ಮಮತಾ ಮಾಪಾರಿ ಇತರರು ಇದ್ದರು.