ಸಿದ್ದಾಪುರ: ವಿದ್ಯಾರ್ಥಿಗಳು ಕಷ್ಷ ಪಟ್ಟು ಅಭ್ಯಾಸ ಮಾಡಿ ಉನ್ನತ ಜೀವನ ನಡೆಸುವ ಮೂಲಕ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಸುಂದರ ಬದುಕು ಸಾಗಿಸಬೇಕು ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು.
ಅವರು ತಾಲೂಕಿನ ಹಲಗೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ತಮ್ಮ ಟ್ರಸ್ಟ್ ವತಿಯಿಂದ 130 ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ಹಾಗೂ ಕ್ರೀಡಾ ಸಾಮಗ್ರಿ ವಿತರಿಸಿ ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಅಂಕಗಳ ಜೊತೆಗೆ ಅರ್ಹತೆಯು ಮುಖ್ಯವಾಗುತ್ತದೆ, ಇದರಲ್ಲಿ ಸಮಯಪ್ರಜ್ಞೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ, ಕಳೆದು ಹೋದ ಸಮಯ ಮತ್ತೆ ಸಿಗದ ಕಾರಣ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವ ಚಾಕಚಕ್ಯತೆಯನ್ನು ಗಳಿಸಿಕೊಳ್ಳಬೇಕು, ನಾನು ಗೆಲ್ಲುತ್ತೇನೆ, ಗುರಿ ಮುಟ್ಟುತ್ತೇನೆ ಎಂಬ ಸಾಧಿಸುವ ಛಲವಂತರಾಗಬೇಕು ಎಂದರು.
ಸಾಧನೆಗೆ ನಿಮ್ಮ ಬಣ್ಣ, ದೇಹ ದಾರ್ಡ್ಯತೆ ಒಟ್ಟಾರೆ ಅಂಗವೈಕಲ್ಯ ಅಡ್ಡಿಯಾಗುವುದಿಲ್ಲ, ಆಗಲೂ ಬಾರದು, ನಮ್ಮನ್ನು ಯಾರು ನಂಬದಿದ್ದರೂ ಪರವಾಗಿಲ್ಲ, ನಮಗೆ ನಮ್ಮ ಮೇಲೆಯೇ ನಂಬಿಕೆ ಇರಬೇಕು ಆಗಲೇ ಜೀವನದಲ್ಲಿ ಉತ್ತಮವಾದುದನ್ನು ಸಾಧಿಸಲು ಸಾಧ್ಯ. ಪೋಷಕರು ತಮ್ಮ ಮಕ್ಕಳು ಬುದ್ಧಿವಂತರಾಗಬೇಕು ಹೆಚ್ಚು ಹೆಚ್ಚು ಅಂಕಗಳನ್ನು ಪಡೆಯಬೇಕು ಎಂದು ಆಸೆಯಿಂದ ತಮ್ಮ ಜೀವನವನ್ನು ಮುಡಿಪಾಗಿಟ್ಟು ಸಾಲ ಮಾಡುವುದರ ಜೊತೆಯಲ್ಲಿ ಕೂಲಿ ಕೆಲಸ ಮಾಡಿ ಶಾಲೆಗೆ ಕಳುಹಿಸುತ್ತಾರೆ ತಂದೆ ತಾಯಿಯರು ತಮ್ಮ ಕಷ್ಟಗಳನ್ನು ಮಕ್ಕಳ ಮುಂದೆ ಎಂದು ಹೇಳಿಕೊಳ್ಳುವುದಿಲ್ಲ ಆ ತಂದೆ ತಾಯಿಗಳಿಗೆ ನಿರಾಸೆ ಮಾಡದೆ ವಿದ್ಯಾರ್ಥಿಗಳು ಓದಿನ ಕಡೆಗೆ ಗಮನಹರಿಸಿ ತಂದೆ-ತಾಯಿಯರ ಆಸೆಯನ್ನು ಪೂರೈಸುವ ಜವಾಬ್ದಾರಿ ಮಕ್ಕಳ ಮೇಲಿರುತ್ತದೆ ಕಷ್ಟಪಟ್ಟು ಓದಿದರೆ ಸಾಧನೆ ನಿಮ್ಮ ಬೆನ್ನು ಹಿಂದೇ ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.