Slide
Slide
Slide
previous arrow
next arrow

ರೇಬಿಸ್ ತಡೆಯಲು ಜನಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಮೊಗವೀರ ಸೂಚನೆ

300x250 AD

ಕಾರವಾರ: ಜಿಲ್ಲೆಯಲ್ಲಿ ರೇಬಿಸ್ ತಡೆಯಲು ಗ್ರಾಮೀಣ ಪ್ರದೇಶಗಳಿಗೆ ಹೋಗಿ ಶಾಲಾ ಮಕ್ಕಳಿಗೆ ಇದರ ಬಗ್ಗೆ ಅರಿವು ಮೂಡಿಸಬೇಕು ಹಾಗೂ ಪ್ರಕರಣಗಳು ಕಂಡುಬಂದಲ್ಲಿ ಆರೋಗ್ಯಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ್ ಅಧಿಕಾರಿಗಳಿಗೆ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ರೇಬೀಸ್ ಕಾಯಿಲೆಯ ಕುರಿತು ಅಂತರ್‌ರಾಜ್ಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರವಾರ ಜಿಲ್ಲಾ ಸರ್ವೇಕ್ಷಣಾಧಿಕಾರಿ ಅರ್ಚನಾ ನಾಯಕ ಮಾತನಾಡಿ ಜಿಲ್ಲೆಯಲ್ಲಿ ಜನವರಿ ಇಂದ ಇಲ್ಲಿಯವರೆಗೆ 6533 ನಾಯಿ ಜೊತೆಗೆ ಇತರೆ ಪ್ರಾಣಿಗಳಿಂದ 349 ಕಚ್ಚಿದ ಪ್ರಕರಣಗಳು ದಾಖಲಾಗಿದೆ ಯಾವುದೇ ರಿತೀಯ ರೇಬೀಸ್ ಕೇಸ್‌ಗಳು ಕಂಡುಬಂದಲ್ಲಿ ಜೊತೆಗೆ ಯಾವುದೇ ಪ್ರಾಣಿಗಳು ಕಚ್ಚಿದರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು, ರೇಬಿಸ್ ಮಾರಣಾಂತೀಕವಾದರೂ ಭಯಪಡುವಂತಹ ರೋಗವೇನಲ್ಲ ಇದಕ್ಕೆ ಕೂಡಲೇ ಚಿಕಿತ್ಸೆ ಪಡೆದರೆ ತಡೆಗಟ್ಟಬಹುದು ಎಂದು ಹೇಳಿದರು.

ಮಿಷನ್ ರೇಬೀಸ್ ಅಡಿಯಲ್ಲಿ ಈಗಾಗಲೇ ಕಾರವಾರ ತಾಲೂಕಿನ 68 ಶಾಲೆಗಳಿಗೆ ಬೇಟಿ ನೀಡಿ ಇದರ ಬಗ್ಗೆ ಮಕ್ಕಳಲಿ ಜಾಗೃತಿ ಮೂಡಿಸಲಾಗಿದ್ದು ಇನ್ನುಳಿದ ಶಾಲೆಗಳಿಗೂ ಬೇಟಿ ನೀಡಿ ಈ ಕುರಿತು ಜಾಗೃತಿ ಮೂಡಿಸುವ ಸಮಾಜಮುಖಿ ಕೆಲಸ ಮಾಡಲು ಬಯಸುವ ಶಿಕ್ಷಕರನ್ನ ನೇಮಿಸಿಕೊಳ್ಳಿ ಜೊತೆಗೆ ಸರಿಯಾದ ಯೋಜನೆ ರೂಪಿಸಿ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

300x250 AD

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶರದ್ ನಾಯಕ್, ಆಂಔ ಡಾ.ಲಲಿತ ಶೆಟ್ಟಿ, ಕಾರವಾರ ಡಿಎಲ್‌ಒ ಶಂಕರ್ ರಾವ್, ಡಿಡಿಪಿಐ ಈಶ್ವರ ನಾಯ್ಕ ಹಾಗೂ ಇನ್ನಿತರ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.

Share This
300x250 AD
300x250 AD
300x250 AD
Back to top