ಕಾರವಾರ : ಪಟ್ಟಣದ ಕೋಡಿಭಾಗದಲ್ಲಿರುವ ಭಂಡಾರಿ ಸಮಾಜ ಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಭಂಡಾರಿ ಸಮಾಜೋನ್ನತಿ ಸಂಘದ ಸಭೆಯು ಇತ್ತೀಚಿಗೆ ನಡೆಯಿತು.
ಸಂಘದ ಕಾರ್ಯದರ್ಶಿ ನಾಗರಾಜ ನಾಯಕ ಮಾತನಾಡಿ ಕರ್ನಾಟಕದಲ್ಲಿ ಹಲವಾರು ಸಮಾಜಗಳಿಗೆ ಈಗಾಗಲೇ ಸರಕಾರಕ್ಕೆ ಕೋರಿಕೊಂಡು ಪ್ರಾಧಿಕಾರ ಅಥವಾ ನಿಗಮ ಮಂಡಳಿ ರಚನೆ ಮಾಡಿಕೊಂಡು ಸರಕಾರದಿಂದ ಸೌಲಭ್ಯಗಳನ್ನು ಪಡೆದುಕೊಳ್ಳುತ್ತೀವೆ. ನಾವುಗಳು ಶಿವಾಜಿ ಮಹಾರಾಜರ ಆಸ್ಥಾನದಲ್ಲಿ ಖಜಾನೆ ಕಾಯುವ ಉಸ್ತುವಾರಿ ನಿಭಾಯಿಸುತ್ತಿದ್ದು ಕಾಲ ಕ್ರಮೇಣ ದಿಕ್ಕು ಪಾಲಾಗಿ ಈಗ ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಾಗಿ, ವಾಸಿಸುತ್ತಿದ್ದು ಕರ್ನಾಟಕ ರಾಜ್ಯಾದ್ಯಾಂತ ನೆಲೆಸಿದ್ದೇವೆ. ರಾಜ್ಯದಲ್ಲಿ 11 ಲಕ್ಷಕ್ಕೂ ಅಧಿಕ ಭಂಡಾರಿ (ದೇಶ ಭಂಡಾರಿ) ಸಮುದಾಯವಿದ್ದು ತೀರ ಹಿಂದುಳಿದ ಜನಾಂಗವಾಗಿರುತ್ತದೆ. ಇವರಲ್ಲಿ ಕೆಲವೇ ಕೆಲವರು ಅನುಕೂಲವಂತವರಿದ್ದು ಉಳಿದವರು ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ಭಂಡಾರಿ ನಿಗಮ ಸ್ಥಾಪನೆಯಾದರೆ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮತ್ತು ಸಮಾಜ ಪ್ರಗತಿಯತ್ತ ಸಾಗಲು ಸಾಧ್ಯ ಎಂದರು.
ಸಮಾಜದ ಜಿಲ್ಲಾ ಅಧ್ಯಕ್ಷರು ಕೇಶವ ದತ್ತ ಪೆಡ್ನೇಕರ ಮಾತನಾಡಿ ಭಂಡಾರಿ ನಿಗಮ ಮಂಡಳಿ ರಚನೆಯಾದರೆ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ. ಕಾರಣ ಆಯಾ ತಾಲೂಕಾಗಳಲ್ಲಿ ಸ್ಥಳೀಯ ಶಾಸಕರ ಮುಖಾಂತರ ಮುಖ್ಯ ಮಂತ್ರಿಗಳಿಗೆ ನಮ್ಮ ಮನವಿ ಮೂಲಕ ವಿನಂತಿಸಿಕೊಳ್ಳಬೇಕು ಸಮಾಜದ ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸಬೇಕು ಎಂದರು.
ಮುದ್ದತ್ತು ಠೇವಣಿಯ ಬಡ್ಡಿಯಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಲು ಸಭೆಯು ನಿರ್ಧರಿಸಿತು. ತಾಲೂಕಾ ಸಂಘಗಳಿಂದ ಪ್ರತಿ ವರ್ಷ ವಂತಿಗೆ ನೀಡುವ ಪ್ರಸ್ತಾಪಕ್ಕೆ ತಾಲೂಕಾ ಸಂಘಗಳು ಒಪ್ಪಿಗೆ ನೀಡಿದವು.
ಕಾರವಾರ, ಕುಮಟಾ, ಹೊನ್ನಾವರ, ಶಿರಸಿ ತಾಲೂಕಾ ಅಧ್ಯಕ್ಷರು ಜಿಲ್ಲಾ ಸಂಘದ ಕೋಶಾಧ್ಯಕ್ಷರು ಮತ್ತು ಶ್ರೀಮತಿ ಛಾಯಾ ಜಾವಕರ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕಾರ್ಯದರ್ಶಿ ನಾಗರಾಜ ನಾಯಕ ಸ್ವಾಗತಿಸಿದರು. ಕೋಶಾಧ್ಯಕ್ಷ ಶಾಂತಾರಾಮ ತಾಮಸೇ ಆಭಾರ ಮನ್ನಣೆ ಮಾಡಿದರು ಸಭೆಯಲ್ಲಿ ಪ್ರಮುಖರಾದ ಸದಾನಂದ ಮಾಂಜ್ರೇಕರ, ಮೋಹನ ಕಿಂದಳಕರ, ಶ್ರೀಧರ ಬೀರಕೋಡಿಕರ, ಅರುಣ ಮಣ್ನೀಕರ, ಶ್ರೀಪಾದ ದೇಶಭಂಡಾರಿ, ಶಂಕರ ದೇಶ ಭಂಡಾರಿ, ಶಾಂತಾರಾಮ ತಾಮಸೇ, ಜಗದೀಶ ದೇಶಭಂಡಾರಿ, ಪ್ರವೀಣ ಮಾಂಜ್ರೇಕರ, ಸಂಜಯ ಕಾಂಬ್ಳೆ, ಪಾಂಡುರಂಗ ಕೆರೆಕರ, ಪ್ರಕಾಶ ದೇಶಭಂಡಾರಿ, ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ನಾಗರಾಗ ನಾಯಕ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.