ಯಲ್ಲಾಪುರ: ತಾಲೂಕಿನ ಗಡಿ ಭಾಗವಾದ ಉಚಗೇರಿಯ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಪಟು ವಿದ್ಯಾರ್ಥಿಗಳಿಗೆ, ಆ ಬಾಗದ ಪಂಚಾಯತ ಸದಸ್ಯ ಹಾಗೂ ಕುಂದರಗಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ದಾಕ್ಲು ಪಾಟೀಲ್ ಗುರುವಾರ ತಮ್ಮ ಸ್ವಂತ ಖರ್ಚಿನಲ್ಲಿ ಕ್ರೀಡಾ ಸಮವಸ್ತ್ರ ವಿತರಿಸಿದರು.
ನಂತರ ಮಾತನಾಡಿದ ಅವರು, ನಾನು ಈ ಶಾಲೆಯ ಹಳೇ ವಿದ್ಯಾರ್ಥಿ. ನಾವೂ ಚಿಕ್ಕವರಿದ್ದಾಗ ಕ್ರೀಡಾಕೂಟಕ್ಕೆ ಹೋಗುವಾಗ ನಮಗೇ ಸಮವಸ್ತ್ರ ಇದ್ದಿರಲಿಲ್ಲ. ಬೇರೆ ಶಾಲೆಯ ಮಕ್ಕಳು ಸಮವಸ್ತ್ರ ನೋಡಿ ನಮಗೂ ಈ ತರಹ ಸಮವಸ್ತ್ರ ಇರಬೇಕಿತ್ತು ಅನಿಸುತ್ತಿತ್ತು. ಆದರೆ ನೀವುಗಳು ಪುಣ್ಯವಂತರು. ಈ ಹಿಂದೆ ಈ ಶಾಲೆಯ ಹೆಣ್ಣುಮಕ್ಕಳಿಗೆ ಸಮವಸ್ತ್ರ ನೀಡಿದ್ದೆ. ಇಂದು ಗಂಡು ಮಕ್ಕಳಿಗೆ ಸಮವಸ್ತ್ರ ನೀಡುತ್ತಿದ್ದೇನೆ. ಸಮವಸ್ತ್ರ ತೊಟ್ಟು ಒಳ್ಳೆಯ ಕ್ರೀಡಾಪಟುವಾಗಿ ಶಾಲೆಯ ಹಾಗು ಊರಿಗೆ ಗೌರವ ತರುವಂತೆ ಕೋರಿದರು.
ಈ ಸಂದರ್ಭದಲ್ಲಿ ಉಚಗೇರಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾದ ಸವಿತಾ ಹೆಗಡೆ, ಸದಸ್ಯರಾದ ಕೊಂಡು ಕೊಕ್ರೆ, ವಿಠ್ಠಲ್ ಲಂಬೋರ್ , ಮಂಗಳ ಸಿದ್ದಿ, ಕಾಶಿ ಗಂಗಾಧರ್, ಸುರೇಶ್ ಮಡಿವಾಳ, ನಾಗು ತೊರವತ, ವಿಠ್ಠಲ್ ಕೋಕ್ರೆ, ವಿನೋದ್ ದೇವಾಡಿಗ, ರತ್ನಾ ನೆರಲಗಿ, ಪಟ್ಟಿ ಕೊಕ್ರೇ ಹಾಗೂ ಶಾಲೆಯ ಮುಖ್ಯ ಶಿಕ್ಷಕರಾದ ಅರ್ ಟಿ ಭಟ್, ಸಹ ಶಿಕ್ಷಕರಾದ ಸುಧಾ ಹೆಗಡೆ, ರಾಮಕೃಷ್ಣ ಬಂಡಾರಿ, ಶ್ರೀಕರ್ ಹೆಗಡೆ ಹಾಗೂ ಮಕ್ಕಳ ಪಾಲಕರು ಹಾಗೂ ಪೋಷಕರು ಇದ್ದರು.