Slide
Slide
Slide
previous arrow
next arrow

ಸೆ.7ಕ್ಕೆ ಸ್ವ ಸಹಾಯ ಸಂಘ ಸಮಾವೇಶ: ವಿವಿಧ ಗೋಷ್ಠಿ ಕಾರ್ಯಕ್ರಮ

300x250 AD

ಶಿರಸಿ: ಪರಮಪೂಜ್ಯ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಶ್ರೀಗಳವರ 32 ನೇ ಚಾತುರ್ಮಾಸ್ಯದ ಸಂದರ್ಭದಲ್ಲಿ ಶ್ರೀಮಠದ ಅಂಗ ಸಂಸ್ಥೆಯಾದ ಗ್ರಾಮಾಭ್ಯುದಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವ ಸಹಾಯ ಸಂಘಗಳ ಸಮಾವೇಶವನ್ನು ಸೆ.7 ಬುಧವಾರದಂದು ಆಯೋಜಿಸಲಾಗಿದೆ. ಪರಮ ಪೂಜ್ಯ ಸ್ವರ್ಣವಲ್ಲಿ ಶ್ರೀಗಳವರ ದಿವ್ಯ ಸಾನಿಧ್ಯದಲ್ಲಿ ಶುಭಾರಂಭಗೊಳ್ಳಲಿರುವ ಕಾರ್ಯಕ್ರಮದಲ್ಲಿ ವಿವಿಧ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ.
ಮೊದಲನೆ ಗೋಷ್ಠಿಯಲ್ಲಿ ಶ್ರೀಮತಿ ಮಮತಾ ಭಟ್ಟ ಶಮೇಮನೆ ಇವರು ಆಹಾರ ಉತ್ಪನ್ನಗಳ ಮೌಲ್ಯವರ್ಧನೆ ಕುರಿತು ಮಾರ್ಗದರ್ಶನ ನೀಡಲಿದ್ದು, ಕೆ.ಡಿ.ಸಿ.ಸಿ. ಬ್ಯಾಂಕ ಶಿರಸಿಯ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಎಲ್. ಎಂ. ಹೆಗಡೆ ಇವರು ಸ್ವ-ಸಹಾಯ ಸಂಘಗಳ ಸಮಸ್ಯೆ, ಲೆಕ್ಕ ಪತ್ರ ನಿರ್ವಹಣೆ ಕುರಿತು ಎರಡನೇ ಗೋ಼ಷ್ಠಿಯಲ್ಲಿ ಸಂವಹನ ನಡೆಸಿಕೊಡಲಿದ್ದಾರೆ.
ಮೂರನೇ ಗೋಷ್ಠಿಯಲ್ಲಿ ಸಿಂಹಶಕ್ತಿ ಒಕ್ಕೂಟದ ಬಗ್ಗೆ ಮಾಹಿತಿ ಸ್ವ- ಸಹಾಯ ಸಂಘಗಳಿಗೆ ದೊರಕುವ ಸೌಲಭ್ಯಗಳ ಕುರಿತು ಸಿಂಹಶಕ್ತಿ ಒಕ್ಕೂಟದ ಕಾರ್ಯದರ್ಶಿ ಅಶೋಕ ಹೆಗಡೆ ಗೋಳಿಕೈ ಇವರು ತಿಳಿಸಿಕೊಡಲಿದ್ದಾರೆ. ನಾಲ್ಕನೆ ಗೋಷ್ಠಿಯಲ್ಲಿ ಭೈರುಂಬೆಯ ಶ್ರೀಗಾರ್ಮೆಂಟ್ಸ ನ ಶ್ರೀಮತಿ ಸರೋಜಾ ಹೆಗಡೆ ಗಡಿಗೆಹೊಳೆ ಇವರು ಸ್ವ-ಸಹಾಯ ಸಂಘಗಳಿಗೆ ಆದಾಯ ತರುವ ಚಟುವಟಿಕೆ ಕುರಿತು ಮಾಹಿತಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಶ್ರೀಧರ ಎಚ್.ಎಸ್. , ಅಧ್ಯಕ್ಷತೆಯನ್ನು ಎಂ.ಸಿ.ಹೆಗಡೆ ಶಿರಸಿಮಕ್ಕಿ ಇವರು ವಹಿಸಲಿದ್ದಾರೆ. ಮಧ್ಯಾಹ್ನ 4 ಘಂಟೆಗೆ ನಡೆಯುವ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಮಜ್ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಕರ್ನಾಟಕ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉಪಸ್ಥಿತರಿರುತ್ತಾರೆ. ಅಲ್ಲದೇ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ ಇವರುಗಳು ಉಪಸ್ಥಿತರಿರುತ್ತಾರೆ. ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರು ಹಾಗೂ ಹಿರಿಯರು ಆದ ಗುರುಪಾದ ಹೆಗಡೆ ಹೆಲ್ಲೆಕೊಪ್ಪ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಆರ್ಥಿಕ ಸಬಲತೆ ಗುಡ್ಡಗಾಡುಗಳ ಹಳ್ಳಿಗಳಲ್ಲಿ ವಾಸಿಸುವ ಜನರು ಪ್ರಾಯಶಃ ಆರ್ಥಿಕವಾಗಿ ದುರ್ಬಲರು ಅವರು ಆರ್ಥಿಕವಾಗಿ ಸುಧಾರಿಸಬೇಕು. ಮನೆಯ ಪುರುಷರ ಸಂಪಾದನೆಯೊಂದಿಗೆ ಸ್ತ್ರೀಯರ ಸಂಪಾದನೆಯೂ ಸೇರಿಕೊಳ್ಳಬೇಕು, ಅದರ ಮೂಲಕ ಶಿಕ್ಷಣ, ಆರೋಗ್ಯ, ಮನೆ, ಕೊಟ್ಟಿಗೆ, ಜಮೀನು ಮುಂತಾದ ಸೌಲಭ್ಯಗಳನ್ನು ಕ್ರಮವಾಗಿ ಹೊಂದಲು ಸಾಧ್ಯ ಈ ಸಾಧ್ಯತೆಗಳ ಪರಿಕಲ್ಪನೆಯಲ್ಲಿ ರೂಪುಗೊಂಡವುಗಳೇ ‘ಸಹೃದಯ ಸಂಘಗಳು’. ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಶ್ರೀ ಮಠದ ಅಧ್ಯಕ್ಷರಾದ ವಿ.ಎನ್. ಹೆಗಡೆ ಬೊಮ್ನಳ್ಳಿ,ಗ್ರಾಮಾಭ್ಯುದಯ ಅಧ್ಯಕ್ಷ ಎಂ.ಸಿ. ಹೆಗಡೆ ಶಿರಸಿಮಕ್ಕಿ ಹಾಗೂ ಗ್ರಾಮಾಭ್ಯುದಯ ಕಾರ್ಯದರ್ಶಿ ಸಂತೋಷ ಹೆಗಡೆ ಕೋಡಿಗಾರ ಇವರು ಜಂಟಿಯಾಗಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top