Slide
Slide
Slide
previous arrow
next arrow

ಸಾರ್ವಜನಿಕ ಗಣೇಶೋತ್ಸವ ಪೆಂಡಾಲ್’ಗಳಲ್ಲಿ ಸಾವರ್ಕರ್ ಫ್ಲೆಕ್ಸ್ ಹಾಕಲು ಆಗ್ರಹ

300x250 AD

ಶಿರಸಿ: 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಸಂಭ್ರಮಾಚರಣೆಯ ಹೊಸ್ತಿಲಲ್ಲಿ ಈ ವರ್ಷ ಕರ್ನಾಟಕದಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್ ಅವರ ಭಾವಚಿತ್ರಕ್ಕೆ, ಅವರ ವ್ಯಕ್ತಿತ್ವಕ್ಕೆ ಅವಮಾನ ಮತ್ತು ಅವರ ದೇಶಭಕ್ತಿಯನ್ನು ಪ್ರಶ್ನಿಸುವ ವಿಚಾರಗಳು ನಡೆಯುತ್ತಿರುವುದು ಕರ್ನಾಟಕದ ದುರಂತ. ದೇಶಕ್ಕೋಸ್ಕರ ತನ್ನ ಕುಟುಂಬ, ಬರವಣಿಗೆ, ತಾರುಣ್ಯ, ಪದವಿ ಮತ್ತು ಸಂಪೂರ್ಣ ಜೀವನವನ್ನು ರಾಷ್ಟ್ರಕ್ಕೆ ಸಮರ್ಪಿಸಿಕೊಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್, ತನ್ನ ಜೀವನದ 27 ವರ್ಷಗಳನ್ನು ಅತ್ಯಂತ ಕಠಿಣ ಕರಿನೀರ ಶಿಕ್ಷೆಗೆ ಒಡ್ಡಿ ಬ್ರಿಟೀಷ್ ಸಾಮ್ರಾಜ್ಯಕ್ಕೆ ಸವಾಲೊಡ್ಡಿದ ಭಾರತಮಾತೆಯ ವೀರಪುತ್ರ, ಹಲವಾರು ಯುವಕರಿಗೆ ಪ್ರೇರಣೆಯಾಗಿ ಇವರ ಸಂಪರ್ಕಕ್ಕೆ ಬಂದ ಯುವ ಸಮೂಹವನ್ನು ಸೂಜಿಗಲ್ಲಿನಂತೆ ಆಕರ್ಷಿಸಿ ಅವರಲ್ಲಿ ಬಹುತೇಕರನ್ನು ಕ್ರಾಂತಿಶಿರೋಮಣಿಗಳಾಗಿ ನಿರ್ಮಾಣ ಮಾಡಿದ ಕೀರ್ತಿ ಸಾವರ್ಕರ್ ಅವರಿಗೆ ಸಲ್ಲಬೇಕು, ಬ್ರಿಟೀಷರಿಗೆ ಭಾರತದಲ್ಲಿ ಮಾತ್ರವಲ್ಲದೇ ಅವರ ದೇಶವಾದ ಇಂಗ್ಲೆಡ್‌ನಲ್ಲೂ ನೆಮ್ಮದಿಯಿಂದ ನಿದ್ದೆ ಮಾಡದಷ್ಟರ ಮಟ್ಟಿಗೆ ಸ್ವಾತಂತ್ರ್ಯದ ಕಿಡಿಹೊತ್ತಿಸಿದ ಧೀರ ಸಾವರ್ಕರ್, ನೇತಾಜಿ ಸುಭಾಷ್‌ ಚಂದ್ರಭೋಸ್, ಮದನ್‌ ಲಾಲ್‌ ಧಿಂಗ್ರಾ, ಲಾಲಾ ಹರದಯಾಳ್‌, ಗದರ್ ಪಾರ್ಟಿ ಹೀಗೆ ಹಲವಾರು ಹೋರಾಟಗಾರರು ಸಂಪರ್ಕಕ್ಕೆ ಬಂದ ತಕ್ಷಣ ಅವರಿಗೆ ಹೋರಾಟದ ಸ್ಪಷ್ಟ ಚಿತ್ರಣವನ್ನು ನೀಡಿ, ಸ್ವಾತಂತ್ರ್ಯದ ದಿಕ್ಕು ತೋರಿಸಿ ಪ್ರೇರಣೆಯಾದವರು ಸಾವರ್ಕರ್.

ಇಂತಹ ಅದಮ್ಯ ಚೇತನ, ಮಹಾನ್ ಹೋರಾಟಗಾರ, ಬ್ರಿಟಿಷ್ ಸಾಮ್ರಾಜ್ಯಕ್ಕೆ ಸವಾಲೆಸೆದ ಯೋಧ, ಕ್ರಾಂತಿಕಾರಿ ಲೇಖಕ ಹೀಗೆ ಬಹು ಆಯಾಮಗಳಲ್ಲಿ ಸ್ವಾತಂತ್ರ್ಯದ ಹೋರಾಟವನ್ನು ನಡೆಸಿ, ಸ್ವಾತಂತ್ರ್ಯ ಯಜ್ಞದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಸಾವರ್ಕರ್ ಅವರನ್ನು ಹೇಡಿ, ದೇಶದ್ರೋಹಿ ಎಂದು ಬಿಂಬಿಸಲು ಬಾಡಿಗೆಯ ಬುದ್ದಿಜೀವಿಗಳು, ಚೀನಾಹಸ್ತಕ ಕಮ್ಯುನಿಸ್ಟವಾದಿಗಳು, ವಿಚಾರವಾದಿಗಳು, ಪ್ರತ್ಯೇಕತಾವಾದಿಗಳು ವ್ಯವಸ್ಥಿತವಾಗಿ ಸಂಚನ್ನು ರೂಪಿಸುತ್ತಿದ್ದಾರೆ.

300x250 AD

ಹಿಂದೂ ಸಮಾಜವನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿಸಲು ಬಾಲಗಂಗಾಧರ ತಿಲಕರು ಹುಟ್ಟುಹಾಕಿದ ಚಳುವಳಿಯೇ ಸಾರ್ವಜನಿಕ ಗಣೇಶೋತ್ಸವ. ಆದ್ದರಿಂದ ಇಂತಹ ಹಿಂದೂಗಳ ಧಾರ್ಮಿಕ ಹಬ್ಬದಲ್ಲಿ ನಗರದ ಎಲ್ಲಾ ಸಾರ್ವಜನಿಕ ಗಣೇಶೋತ್ಸವ ಪೆಂಡಾಲ್ ಗಳಲ್ಲಿ ಸಾವರ್ಕರ್ ಅವರ ಭಾವಚಿತ್ರ ಹಾಗೂ ಅವರ ಕಟೌಟ್ ನಿಲ್ಲಿಸಿ ಸ್ವಾತಂತ್ರ್ಯ ಪುಷ್ಪಕ್ಕೆ ಗೌರವವನ್ನು ಸಲ್ಲಿಸಬೇಕೆಂದು ಸ್ವಾತಂತ್ರ್ಯ ವೀರ ಸಾವರ್ಕರ್ ವಿಚಾರ ವೇದಿಕೆಯವರಿಂದ ಪ್ರಕಟಣೆ ಮೂಲಕ ವಿನಂತಿಸಲಾಗಿದೆ.

Share This
300x250 AD
300x250 AD
300x250 AD
Back to top