ನವದೆಹಲಿ: 17 ವರ್ಷದ ಕುಸ್ತಿಪಟು ಆಂಟಿಮ್ ಪಂಗಲ್ ವಿಶ್ವ ಜೂನಿಯರ್ ಕುಸ್ತಿಯಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಹುಡುಗಿಯಾಗಿ ಹೊರಹೊಮ್ಮಿದ್ದಾರೆ. ಬಲ್ಗೇರಿಯಾದ ಸೋಫಿಯಾದಲ್ಲಿ ನಡೆದ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಿದ ನಂತರ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ಅವರು ಫೈನಲ್ನಲ್ಲಿ ಕಜಕಿಸ್ತಾನ್ನ ಅಲ್ಟಿನ್ ಶಗಾಯೆವಾ ಅವರನ್ನು 8-0 ಅಂತರದಿಂದ ಸೋಲಿಸಿದರು. ಮೊದಲ ಬಾರಿಗೆ ಯುರೋಪಿಯನ್ ಚಾಂಪಿಯನ್ ಒಲಿವಿಯಾ ಆಂಡ್ರಿಚ್ ಅವರನ್ನು 11-0ನಿಂದ ಸೋಲಿಸಿದರು ಮತ್ತು ನಂತರ ಒಂದು ನಿಮಿಷದಲ್ಲಿ ಜಪಾನ್ನ ಅಯಾಕಾ ಕಿಮುರಾ ಅವರನ್ನು ಪಿನ್ ಮಾಡಿ ಪಂದ್ಯಾವಳಿಯಾದ್ಯಂತ ತಮ್ಮ ಪ್ರಾಬಲ್ಯವನ್ನು ಮೆರೆದರು. ಉಕ್ರೇನ್ನ ಆಟಗಾರ್ತಿ ವಿರುದ್ಧ ಜಯಿಸಿದರು.
ಕಠಿಣ ಮತ್ತು ಸವಾಲಿನ ಪ್ರಯಾಣದ ನಂತರ ಆಂಟಿಮ್ ಪದಕವನ್ನು ಖಚಿತಪಡಿಸಿಕೊಂಡರು.
ಕೃಪೆ : news13.in