Slide
Slide
Slide
previous arrow
next arrow

ಬಿಜೆಪಿ ನಂಬಿ ಕೂತರೆ ಹಿಂದುಗಳಿಗೆ ಪ್ರಯೋಜನವಿಲ್ಲ: ಮುತಾಲಿಕ್

300x250 AD

ಶಿರಸಿ: ಬಿಜೆಪಿ ಅಧಿಕಾರ ಅನುಭವಿಸುತ್ತಿದೆ ಎಂದರೆ ಅದಕ್ಕೆ ಕಾರಣ ಹಿಂದುಗಳು. ಆದರೆ ಹಿಂದುಗಳ ರಕ್ಷಣೆ ಕೇಳಿದರೆ ಅವರು ಮುಂದೆ ಬರುವದಿಲ್ಲ. ನಮ್ಮ ರಕ್ಷಣೆ ಕೇಳುವ ಹಕ್ಕು ನಮಗಿದೆ. ಬಿಜೆಪಿ ನಂಬಿ ಕೂತರೆ ಹಿಂದುಗಳಿಗೆ ಪ್ರಯೋಜನವಿಲ್ಲ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ.
ಅವರು ಇಲ್ಲಿಯ ಅಂಜನಾದ್ರಿಯ ದೇವಸ್ಥಾನದಲ್ಲಿ ಜಾಗೃತ ನಾಗರಿಕ ವೇದಿಕೆ ಹಾಗೂ ಹಿಂದೂ ಜಾಗರಣ ವೇದಿಕೆಯಿಂದ ಏರ್ಪಡಿಸಲಾಗಿದ್ದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ದೇಶ ರಕ್ಷಣೆಯಲ್ಲಿ ಬಿಜೆಪಿ ನಮಗೆ ಕೈ ಜೋಡಿಸಬೇಕು. ಬರೇ ಬೊಗಳೆ ಬಿಟ್ಟರೆ ನಾವು ನಂಬಲು ತಯಾರಿಲ್ಲ. ನಮಗೆ ಸಾಥ್ ಕೊಟ್ಟರೆ ಕೊಡಿ, ಇಲ್ಲವಾದರೆ ನಾವೇ ನಿಮ್ಮನ್ನು ಬಗ್ಗು ಬಡಿದು ಮುನ್ನಡೆಯುತ್ತೇವೆಂದು ಹೇಳಿದರು.
ಹಿಂದುಗಳ ರಕ್ಷಣೆಗಾಗಿ ಎಷ್ಟೋ ಹಿಂದುಗಳು ಜೈಲು ಪಾಲಾಗುತ್ತಿದ್ದು, ಅವರನ್ನು ಬಿಡಿಸಿಕೊಂಡು ಬರಲು ಅವರಲ್ಲಿ ಹಣವಿಲ್ಲ. ಇಂತಹ ಹಿಂದುಗಳಾದ ನಾವು ಅವರನ್ನು ಹೊರಗೆ ತರಲು ಕೈಜೋಡಿಸಬೇಕು. ಅದರಂತೆ ಪೊಲೀಸರು, ವಕೀಲರು ಕೂಡಾ ಹಿಂದುಗಳ ರಕ್ಷಣೆಗೆ ಬರಬೇಕೆಂದು ಹೇಳಿದರು. ಹಿಂದುಗಳಾದ ನಾವು ಇನ್ನುಮುಂದೆ ಒಂದಿಂಚು ಜಾಗ ಯಾರಿಗೂ ಬಿಟ್ಟು ಕೊಡುವದಿಲ್ಲ. ಈಗಾಗಲೇ ನಾವು ಎಲ್ಲವನ್ನೂ ಕೊಟ್ಟು ಮುಗಿಸಿದ್ದೇವೆ. ಇರುವಷ್ಟಾದರೂ ಜಾಗವನ್ನು ಕಾಪಾಡಿಕೊಳ್ಳಲು ಈ ಸಂಕಲ್ಪ ದಿನದಲ್ಲಿ ಪಣ ತೊಡಬೇಕೆಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ‍್ಯ ಬಂದರೂ ಈ ಪ್ರಮೋದ್ ಮುತಾಲಿಕ್‌ಗೆ ಸ್ವಾತಂತ್ರ‍್ಯವಿಲ್ಲ. ನೆರೆಯ ಗೋವಾ ರಾಜ್ಯ ಅಷ್ಟೇ ಏಕೆ ಗದಗ ಜಿಲ್ಲೆಯಲ್ಲಿ ಸೇರಿದಂತೆ 21 ಜಿಲ್ಲೆಗಳಲ್ಲಿ ನನಗೆ ನಿರ್ಬಂಧ ಹೇರಲಾಗಿದೆ. ಗೋವಾದಲ್ಲಿ ವಿದೇಶಿಗರು ಬರುತ್ತಾರೆ, ನಾನೇಕೆ ಅಲ್ಲಿಗೆ ಹೋಗಬಾರದೆಂದು ಪ್ರಶ್ನಿಸಿದ ಅವರು, ನನಗೆ ಅಲ್ಲಿ ಕಳೆದ ಎಂಟು ವರ್ಷಗಳಿಂದ ನಿರ್ಬಂಧ ಹೇರಲಾಗಿದೆ ಎಂದರು. ನಮಗೆ ಸ್ವಾತಂತ್ರ‍್ಯ ಬಂದು 75 ವರ್ಷವಾದರೂ ಏಕೆ ನಾವು ಅಖಂಡ ಭಾರತ ಸಂಕಲ್ಪ ದಿನವನ್ನು ಆಚರಿಸಬೇಕೆಂದು ಯಾರಿಗೂ ಗೊತ್ತಿಲ್ಲ. ನಿಜವಾಗಿಯೂ ನಾವು ದೇಶ ವಿಭಜನೆಯಾದ ಸಂದರ್ಭದಲ್ಲಿ ನಡೆದ ಕರಾಳತೆಯನ್ನು ನೆನೆಸಿಕೊಂಡು ದೇಶ ಕಟ್ಟಲು ಕಂಕಣ ತೊಡುವ ದಿನ ಇದಾಗಿದೆ ಎಂದರು.
ವೇದಿಕೆಯಲ್ಲಿ ಅಂಜನಾದ್ರಿ ದೇವಸ್ಥಾನದ ಅಧ್ಯಕ್ಷ ಕಿರಣ ಚಿತ್ರಗಾರ್, ನಿವೃತ್ತ ಸೈನಿಕ ಸುಭೆದಾರ್ ಈ ರಾಮು ಉಪಸ್ಥಿತರಿದ್ದರು. ಮಾಂತೇಶ ಹಾದಿಮನೆ ಕಾರ್ಯಕ್ರಮ ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top