ಅಂಕೋಲಾ: ತಾಲೂಕಿನ ಶೆಟಗೇರಿ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ಶಾಲಾ ಪಂಚಾಯತ ಮತ್ತು ವಿವಿಧ ಸಂಘಗಳ ಸಮಾರಂಭವನ್ನು ಗ್ರಾಮ ಪಂಚಾಯತ ಶೆಟಗೇರಿ ಅಧ್ಯಕ್ಷೆ ಸವಿತಾ ನಾಯಕ ಉದ್ಘಾಟನೆ ಮಾಡಿದರು.
ಈ ಸಮಯದಲ್ಲಿ ಮಾತನಾಡಿ, ಸದ್ಭಾವನೆ, ಕರ್ತವ್ಯ ಪಾಲನೆ ಹಾಗೂ ಶಿಸ್ತಿನಿಂದ ವರ್ತಿಸಿ ಶಾಲಾ ಕಾರ್ಯಕ್ರಮ ಯಶಸ್ವಿಗೊಳಿಸಿ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಮಿತಿ ಹಾಗೂ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ರಮಾನಂದ ಬಿ.ನಾಯಕ ಮಾತನಾಡಿ, ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗಳು ಘನತೆ ಮತ್ತು ಗೌರವ ಹೆಚ್ಚಿಸಿಕೊಳ್ಳುವಂತೆ ನಡೆದುಕೊಳ್ಳಬೇಕು. ಅದರ ಜೊತೆಗೆ ಅಭ್ಯಾಸದ ಕಡೆಗೆ ಗಮನ ಕೊಟ್ಟು ಸೌಜನ್ಯತೆಯನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಿ ಎಂದು ಹಿತವಚನ ನುಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮಿ ಪಾಟೀಲ ಮಾತನಾಡಿ, ಇದು ನಾನು ಕಲಿತ ಶಾಲೆ. ಹಿಂದಿನಿಂದಲೂ ನಡೆದು ಬಂದ ಶಾಲಾ ಸಂಸತ್ತಿನ ಕಾರ್ಯಕ್ರಮಗಳನ್ನು ಚಾಚು ತಪ್ಪದೇ ಪಾಲಿಸಿಕೊಂಡು ಬಂದಿರುತ್ತಾರೆ. ಇದು ವಿದ್ಯಾರ್ಥಿಗಳಿಗೆ ವರವಾಗಿದೆ. ಇಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಇಲ್ಲಿಯ ಗುರುಗಳು ಮಾತೃ ವಾತ್ಸಲ್ಯ ಹೊಂದಿದ್ದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಸಾಹಿತಿ ಹಾಗೂ ಶಿಕ್ಷಣ ಸಮಿತಿಯ ಗೌರವಾಧ್ಯಕ್ಷ ಶಾಂತಾರಾಮ ಎನ್.ನಾಯಕ ಮಾತನಾಡಿ, ಈ ಶಾಲೆಯ ಹಳೆಯ ವಿದ್ಯಾರ್ಥಿ ಶಾಲಾ ಸಂಸತ್ತಿನ ಹಳೆಯ ಸದಸ್ಯರಾಗಿರುವ ರಮಾನಂದ ಬಿ. ನಾಯಕ ಅವರು ಮಾರ್ಗದರ್ಶನ ನೀಡುತ್ತ ಈ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಮುಂದೆಯು ಕೂಡ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಲಿ. ನೀವು ಕೂಡ ಶಾಲಾ ಪಂಚಾಯತ ಕಾರ್ಯಗಳನ್ನು ನಿಷ್ಠೆಯಿಂದ ಪಾಲಿಸಿ ಸಮಾಜದ ಒಳ್ಳೆಯ ಪ್ರಜೆಗಳಾಗಿ ಎಂದು ಆಶೀರ್ವಚನ ನೀಡಿದರು.
ಕಾರ್ಯಕ್ರಮ ಲಕ್ಷಿö್ಮÃ ಗೌಡ ಮತ್ತು ಸಂಗಡಿಗರ ಸ್ವಾಗತ ಗೀತೆಯೊಂದಿಗೆ ಪ್ರಾರಂಭವಾಯಿತು. ಮುಖ್ಯಾಧ್ಯಾಪಕ ಎನ್.ವಿ. ರಾಠೋಡ ಗಣ್ಯ ಅತಿಥಿಗಳ ಪರಿಚಯ ಮಾಡಿ ಸ್ವಾಗತ ಕೋರಿದರು. ದೈಹಿಕ ಶಿಕ್ಷಕ ಭಾರ್ಗವ ನಾಯಕ ಶಾಲಾ ಪಂಚಾಯತ ಸದಸ್ಯರಿಗೆ ಪ್ರಮಾಣ ವಚನವನ್ನು ಬೋಧಿಸಿದರು. ಶಿಕ್ಷಕಿಯರಾದ ಶಾಂತಲಾ ನಾಯಕ ಹಾಗೂ ಅನುಪಮಾ ನಾಯಕ ಶಾಲಾ ಪಂಚಾಯತ ವಿವಿಧ ಸಂಘಗಳ ವರದಿಯನ್ನು ಓದಿದರು. ಶಿಕ್ಷಕ ರಾಜು ಜಿ.ಶೆಡಗೇರಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಶಿಕ್ಷಕ ಎಂ.ಎಸ್. ದೇವಾಡಿಗ ವಂದಿಸಿದರು. ವೇದಿಕೆಯ ಮೇಲೆ ಶಿಕ್ಷಣ ಇಲಾಖೆಯ ಅಧಿಕಾರಿ ಬಿ.ಎಲ್. ನಾಯ್ಕ, ಪಂಚಾಯತ ಪ್ರಧಾನ ಕಾರ್ಯದರ್ಶಿ ಗೋಕುಲ ವೆಂಕಟರಾಯ ನಾಯಕ, ಸುಕನ್ಯಾ ಶಿವಾನಂದ ಗೌಡ ಉಪಸ್ಥಿತರಿದ್ದರು.