Slide
Slide
Slide
previous arrow
next arrow

ಶ್ರೀ ವಿನಾಯಕ ಸೌಹಾರ್ದ ಸಹಕಾರಿಗೆ 36.81 ಲಕ್ಷ ನಿವ್ವಳ ಲಾಭ: ಆನಂದ ನಾಯ್ಕ

300x250 AD

ಸಿದ್ದಾಪುರ: ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿರುವ ಶ್ರೀ ವಿನಾಯಕ ಸೌಹಾರ್ದ ಕ್ರೆಡಿಟ್‌ಕೋ-ಆಪ್ ಲಿ. 2021-22ನೇ ಸಾಲಿನಲ್ಲಿ 36.81 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ. ವರ್ಷಾಂತ್ಯಕ್ಕೆ 16936 ಸದಸ್ಯರನ್ನು ಹೊಂದಿದ್ದು, ವರದಿ ಸಾಲಿನಲ್ಲಿ 40.35ಕೋಟಿ ದುಡಿಯುವ ಬಂಡವಾಳವನ್ನು ಕ್ರೋಢೀಕರಿಸಿಕೊಂಡು ಉತ್ತಮ ಪ್ರಗತಿಯನ್ನು ಸಾಧಿಸಿದೆ ಎಂದು ಸಹಕಾರಿಯ ಅಧ್ಯಕ್ಷರಾದ ಆನಂದ ನಾಯ್ಕ ಹೊಸೂರು ತಿಳಿಸಿದರು.

ಅವರು ಪಟ್ಟಣದ ರಾಘವೇಂದ್ರ ಮಠದ ಪೂರ್ಣಪ್ರಜ್ಞಾ ಸಭಾಭವನದಲ್ಲಿ ನಡೆದ ಸಹಕಾರಿಯ ವಾರ್ಷಿಕ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾನ ಮನಸ್ಕ ನಿರ್ದೇಶಕ ಮಂಡಳಿ ಮತ್ತು ನಿಷ್ಠಾವಂತ ಸಿಬ್ಬಂದಿಗಳ ಸಹಯೋಗದೊಂದಿಗೆ ಸಂಸ್ಥೆ ಉತ್ತಮ ಸೇವೆ ನೀಡುತ್ತಾ ಬಂದಿರುತ್ತದೆ. ಈಗಾಗಲೆ ಉತ್ತರ ಕನ್ನಡಜಿಲ್ಲೆಯ ಸಿದ್ದಾಪುರ, ಶಿರಸಿ,ಭಟ್ಕಳ,ಹೊನ್ನಾವರ, ಕುಮಟಾಗಳಲ್ಲಿ ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರ ಗಳಲ್ಲಿ ಸಹಕಾರಿಯ ಶಾಖೆಗಳು ಕಾರ್ಯ ನಿರ್ವಹಿಸುತ್ತಿದೆ. ಈ ಸಾಲಿನಲ್ಲಿ ಕೂಡಾ ಸದಸ್ಯರ ಶೇರು ಹಣದ ಮೇಲೆ 15% ಡಿವಿಡೆಂಡ್ ಘೋಷಿಸಿದೆ. ಸಂಸ್ಥೆಯ ಈವರೆಗಿನ ಪ್ರಗತಿಗೆ ಜೊತೆಗೂಡಿ ಕೈಜೋಡಿಸಿದ ಎಲ್ಲಾ ಸದಸ್ಯರನ್ನೂ ಈ ಸಂದರ್ಭದಲ್ಲಿ ಹಾರ್ದಿಕವಾಗಿ ಅಭಿನಂದಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಲೆಕ್ಕಪರಿಶೋಧಕರಾದ ಬಿ.ವಿ.ರವೀಂದ್ರನಾಥ ಸಾಗರ ಇವರು ಸಂಸ್ಥೆಯ ಸಾಮರ್ಥ್ಯ, ಪ್ರಗತಿಯ ಲಕ್ಷಣಗಳು ಹಾಗೂ ವ್ಯವಸ್ಥಿತ ನಿರ್ವಹಣೆ ಇವುಗಳ ಬಗ್ಗೆ ಶ್ಲಾಘಿಸಿದರು ಹಾಗೂ ಆರ್ಥಿಕ ಶಿಸ್ತಿನ ಕುರಿತು ತಿಳಿಸಿದರು.

300x250 AD

ಈ ಸಭೆಯಲ್ಲಿ ಬಹುತೇಕ ಅರ್ಹ ಸದಸ್ಯರು ಹಾಜರಿದ್ದು, ಸಭೆಯಲ್ಲಿ ಪರಿಶೋಧಿತ ಲೆಕ್ಕಪತ್ರಗಳು, ಅಂದಾಜು ಅಯ-ವ್ಯಯ, ಕಾರ್ಯಯೋಜನೆಗಳು, ಉಪವಿಧಿ ತಿದ್ದುಪಡಿ ಪ್ರಸ್ತಾವನೆ ಹಾಗೂ ಇನ್ನಿತರ ತಃಖ್ತೆ ಮತ್ತು ನಿರ್ಣಯಗಳಿಗೆ ಅನುಮೋದನೆ ಪಡೆಯಲಾಯಿತು. ವೇದಿಕೆಯಲ್ಲಿ ಸಹಕಾರಿಯ ವ್ಯವಸ್ಥಾಪಕ ನಿರ್ದೇಶಕರಾದ ವಿನಾಯಕ ನಾಯ್ಕ, ನಿರ್ದೇಶಕರುಗಳಾದ ವಿ.ಬಿ.ಶೇಟ್, ಪ್ರೇಮಾನಂದ ಕಾಮತ್, ಪರಮೇಶ್ವರ ನಾಯ್ಕ, ಸರೋಜಾ ನಾಯ್ಕ, ಸವಿತಾ ನಾಯ್ಕ, ರಾಘವೇಂದ್ರ ಪೈ,ಮಹಾಬಲೇಶ್ವರ ನಾಯ್ಕ, ಹನುಮಂತಪ್ಪ ವಡ್ಡರ ಮುಂತಾದವರಿದ್ದರು.

ನೇಹಾ ನಾಯಕ, ಮಧುರಾ ಹೆಗಡೆ, ರೇವತಿ ಮೇಸ್ತ ಪ್ರಾರ್ಥಿಸಿದರು. ಪ್ರಧಾನ ವ್ಯವಸ್ಥಾಪಕರಾದ ಶ್ರೀಧರ ಎಂ. ಹೆಗಡೆ ನಿರ್ವಹಿಸಿದರು. ವಿಭಾಗೀಯ ವ್ಯವಸ್ಥಾಪಕ ಪ್ರಶಾಂತ ನಾಯ್ಕ, , ಶಾಖಾ ವ್ಯವಸ್ಥಾಪಕರುಗಳಾದ ಸಂತೋಷ ನಾಯಕ್,ಕಾರ್ತೀಕ ನಾಯ್ಕ, ವಿನಾಯಕ ಗೌಡವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಅಕೌಂಟಂಟ್ ಭಾಗೀರಥಿ ಮೇಸ್ತ ಹಾಗೂ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು. ನಿರ್ದೇಶಕರಾದ ಪರಮೇಶ್ವರ ನಾಯ್ಕ ವಂದಿಸಿದರು.

Share This
300x250 AD
300x250 AD
300x250 AD
Back to top