ಧಾರವಾಡ: ಧಾರವಾಡದ ಅರ್ಜುನ (ಶಾಂತಿನಿಕೇತನ) ವಿಜ್ಞಾನ ಪದವಿ-ಪೂರ್ವ ಮಾಹಾವಿದ್ಯಾಲಯದ ವಿದ್ಯಾರ್ಥಿಗಳು ಜೂನ 2022 ರಲ್ಲಿ ನಡೆದ ವೃತ್ತಿಪರ ಕೋರ್ಸ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಉತ್ತಮ ಸಾಧನೆ ಮಾಡಿದ್ದಾರೆ.
ಇಂಜಿನಿಯರಿಂಗ್ ವಿಭಾಗದಲ್ಲಿ ಒಟ್ಟು 83 ವಿದ್ಯಾರ್ಥಿಗಳಲ್ಲಿ 17 ವಿದ್ಯಾರ್ಥಿಗಳು 10,000 ಒಳಗಡೆ ರ್ಯಾಂಕನ್ನು ಪಡೆದಿದ್ದಾರೆ. ಅದರಲ್ಲಿ ವಿಶ್ವನಾಥ ಭಟ್(203, ಅಗ್ರಿ 414), ನಮನ್ ಭಟ್(385), ಆದಿತ್ಯ ಭಟ್(519), ಖುಶಿ ಹೆಬ್ಬಿಕರ(1473, ಅಗ್ರಿ 515, ವೆಟರ್ನರಿ 1761), ಅನಿಕೇತ ಕಿಣಿ(2011), ಕಾರ್ತಿಕ ದೇವಾಡಿಗ(2196), ಬಾಲಗಂಗಾಧರ ಭಟ್(2722), ಶ್ರೀರಾಮ್(3147), ಅಕ್ಷಯ ನಾಯ್ಕ(3340), ಆಜ್ಞಾ ನಾರಾಯಣ ಪ್ರಭು(3377), ಅನಿಕೇತ ಆಲದಮರ(3418), ಅನುಶ್ರೀ ಭಟ್(3607), ಗುಣರಂಜನ್(7647) ವಿಕಾಸ ಚೌಧರಿ(7855), ಪಲ್ಲವಿ ಹೆಗಡೆ(1978, ಅಗ್ರಿ 275, ವೆಟರ್ನರಿ 425), ಪ್ರಜ್ಞಾ ನಾಯಕ ಬೆಣ್ಣೆ(8167), ಶ್ರೇಯಾ ಭಟ್(9114) ರ್ಯಾಂಕಗಳನ್ನು ಪಡೆದು ಕಾಲೇಜಿಗೆ ಹೆಮ್ಮೆ ತಂದಿದ್ದಾರೆ. ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.