ಶಿರಸಿ:ಅಂತರಾಷ್ಟ್ರೀಯ ಕರ್ನಾಟಕ ಕ್ರೈಸ್ತ ಸಂಘಗಳ ಒಕ್ಕೂಟ ಶಿರಸಿ ಶಾಖೆಯ ವತಿಯಿಂದ ಇತ್ತೀಚೆಗೆ ನಗರದ ಬಾಲಯೇಸು ದೇವಾಲಯ ಅಗಸೆಬಾಗಿಲ ಸಭಾಭವನದಲ್ಲಿ 2021-2022 ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಉತ್ತಮ ಅಂಕಗಳಿಸಿದ 31 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. 75 ನೇ ಸಂವತ್ಸರಕ್ಕೆ ಕಾಲಿರಿಸಿದ ವಂದನೀಯ ಫಾದರ ಮೊನ್ಸೆದಾರ ಸೈಮನ್ ಟೇಲಿಸ ಇವರಿಗೆ ಮತ್ತು ಕೋವಿಡ್ ಸಮಯದಲ್ಲಿ ತೀರಿಹೋದವರ ಸಮುದಾಯದ ಸಂಪ್ರದಾಯದಂತೆ ಶವ ಸಂಸ್ಕಾರ ನೆರವೇರಿಸಲು, ಉಚಿತ ವಾಹನ ಅಂಬುಲೆನ್ಸ ಸೇವೆ ನೀಡಿ ಶ್ರಮಿಸಿದ ಪಯ್ಯು ಚೌಟಿ ಹಾಗೂ ಸರ್ಕಾರದ ಸೇವೆಯಲ್ಲಿ ಉತ್ತಮ ಸೇವಾ ಪುರಸ್ಕೃತರಾದ ಡೇರಿಕ್ ಸಾಲ್ಡಾನಾ ಇವರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಡಯಾಸಿಸ್ ಆಫ ಕಾರವಾರ ಇದರ ಪ್ರತಿನಿಧಿಯಾಗಿ ವಂದನೀಯ ಮೊನ್ಸಿದಾರ ಫಾದರ್ ಸೈಮನ್ ಟೇಲಿಸ್, ಹಾಗೂ ಸಭಾಧ್ಯಕ್ಷರಾಗಿ ಇಪ್ಕಾ, ಜಿಲ್ಲಾಧ್ಯಕ್ಷರಾದ ಸಾಮಸನ್ ಡಿಸೋಜಾ ಕಾರವಾರ ಇವರು ವಹಿಸಿದರು.
ಪ್ರಾರಂಭದಲ್ಲಿ ಅಗಸೆಬಾಗಿಲ ಚರ್ಚನ ಪ್ರಧಾನ ಗುರುಗಳಾದ ವಂ.ಫಾ.ಅನಕ್ಲಟಸ್ ಡಿಮೆಲ್ಲೊ ಆಶೀರ್ವಚನ ನೀಡಿದರು. ಇಪ್ಕಾ ಶಿರಸಿ ಶಾಖೆಯ ಅಧ್ಯಕ್ಷರಾದ ನಿಕ್ಸನ್ ಡಿಕೋಸ್ತಾರವರು ಸ್ವಾಗತಿಸಿದರು. ವೇದಿಕೆಯಲ್ಲಿ ಸಂತ ಅಂತೋನಿ ದೇವಾಲಯ ಪ್ರಧಾನ ಗುರು ವಂ.ಫಾ. ಜಾನ್ ಫರ್ನಾಂಡೀಸ್, ಡಾನ್‌ಬಾಸ್ಕೊ ದೇವಾಲಯ ಶಿರಸಿ ಇದರ ಪ್ರಧಾನ ಗುರು ವಂ.ಫಾ. ಲೀನೊ ಲೋಪಿಸ್ ಹಾಗೂ ಸೆಂಟ್ ಪೌಲ್ ಮಾರತೋಮಾ ದೇವಾಲಯ ಶಿರಸಿ ಪ್ರಧಾನ ಗುರುಗಳಾದ ವಂ.ಫಾ. ಆಸಿಸ್ ತೋಮಸ್, ಇಪ್ಕಾ ಶಿರಸಿ ಶಾಖೆಯ ಉಪಾಧ್ಯಕ್ಷರಾದ ಸುಭಾಸ್ ಕೈರಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದು 23 ಬಡ ವಿದ್ಯಾರ್ಥಿಗಳಿಗೆ ಬ್ಯಾಗ ಮತ್ತು ಬ್ಲಾಕೇಡ್ ಹಂಚಿದರು. ಒಕ್ಕೂಟದ ಹಿರಿಯ ಸದಸ್ಯರುಗಳಾದ ಎ. ಆರ್. ಫರ್ನಾಂಡೀಸ್ ಹಾಗೂ ಗ್ರೇಗರಿ ಫರ್ನಾಡೀಸ್ ಉಪಸ್ಥಿತರಿದ್ದರು. ಇಪ್ಕಾದ ಖಜಾಂಚಿ ಜಾನ್ ಎಸ್. ರೆಬೆಲ್ಲೊ, ಎಸ್.ಆರ್. ಡಿಸೋಜಾ, ಜಾನಸನ್ ಫರ್ನಾಡೀಸ್, ಮೈಕಲ್ ಬ್ರೀಟೊ, ಶ್ರೀಮತಿ ಜೂಲಿಯಾನ್ ಮಚಾಡೊ, ಶ್ರೀಮತಿ ಮಾರ್ತಾ ಪ್ರಿಂಟೊ, ಮೈಕಲ್ ಫರ್ನಾಡೀಸ್, ಫೆಲಿಕ್ಸ ಮಚಾಡೊ ಜುಜೆ ಫರ್ನಾಂಡೀಸ್ ಮುಂತಾದವರು ಹಾಜರಿದ್ದರು.
ಸೈಮನ್ ಮೆನೆಜಿಸ್ ಕರ‍್ಯಕ್ರಮ ನಿರೂಪಿಸಿದರು. ಜೊಶುವಾ ಜಾನ್ ವಂದಿಸಿದರು.