ಕುಮಟಾ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಮಿರ್ಜಾನಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಸ್ತುತ ಸಾಲಿನ (2021-22) ಆಲ್ ಇಂಡಿಯಾ ಸೆಕೆಂಡರಿ ಸ್ಕೂಲ್ ಎಕ್ಷಾಮಿನೇಶನ್ (AISSE) ಪರೀಕ್ಷೆಯಲ್ಲಿ ಪರೀಕ್ಷೆಗೆ ಹಾಜರಾದ 53 ವಿದ್ಯಾರ್ಥಿಗಳಲ್ಲಿ 53 ವಿದ್ಯಾರ್ಥಿಗಳು ಉತ್ತೀರ್ಣಗೊಂಡು ಶೇ. 100 ಫಲಿತಾಂಶ ದಾಖಲಿಸಿದ್ದಾರೆ.
ಸಂಜನಾ ಎಸ್. ಪಟಗಾರ – 96.6%, ಶ್ರೀಷಾ ಆರ್. ಆಚಾರ್ಯ – 92.8%, ರಕ್ಷಾ ಎನ್. ನಾಯ್ಕ – 91.8%, ಶ್ರಿಯಾ ಜಿ. ಅಡಿಮುಳೆ – 91%, ಮನೀಶ ಎಂ. ಪಟಗಾರ – 88.2%, ರಿಷಬ ಕುದ್ರಿಗಿ-87.8%, ಸುಮೀತ್ ಶಿಗ್ಗಾವಿ – 87.4%, ಹಿರಲ್ ಪಿ. ಪಟೇಲ್ – 86.4%, ಮಹಮ್ಮದ್ ಒವೈಸ್ ಆಗಾ – 84.8%, ವಿಜೇತ ಎಲ್. ನಾಯ್ಕ – 84.4, ವೈಭವ್ ವಿ. ಪಾಲ್ಕರ್ – 84%, ಅಸದ್ ಎಂ. ಶೇಖ್ – 83.4%, ಧೀರಜ್ ವಿ. ನಾಯ್ಕ – 82.8%, ವೈಭವಿ ಎಸ್. ದೇಶಭಂಡಾರಿ – 81%, ಸಂದೇಶ ಎಂ. ಜಿ – 80% ಅಂಕ ಗಳಿಸಿದ್ದಾರೆ.
ಪರೀಕ್ಷೆಗೆ ಹಾಜರಾದ ಒಟ್ಟು 53 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್), 31 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 12 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಬಿಜಿಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.