ಸಿದ್ದಾಪುರ: ಸ್ಥಳೀಯ ಎಂ.ಜಿ.ಸಿ. ಕಲಾ, ವಾಣಿಜ್ಯ ಹಾಗೂ ಜಿ.ಎಚ್.ಡಿ.ವಿಜ್ಞಾನ ಮಹಾವಿದ್ಯಾಲಯಲ್ಲಿ ಗಣೇಶ ಹೆಗಡೆ ದೊಡ್ಮನೆ ಜನ್ಮಶತಮಾನೋತ್ಸವ ಮತ್ತು ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಸತ್ತು, ಎನ್.ಎಸ್.ಎಸ್.ಘಟಕ, ಯುವರೆಡ್ ಕ್ರಾಸ್ ಘಟಕ ಹಾಗೂ ಸಾರ್ವಜನಿಕ ತಾಲೂಕು ಆಸ್ಪತ್ರೆಗಳ ಸಂಯುಕ್ತಾಶ್ರಯದಲ್ಲಿ ರಕ್ತ ಗುಂಪು ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಯಿತು.
ಸಾರ್ವಜನಿಕ ತಾಲುಕಾ ಆಸ್ಪತ್ರೆಯ ವೈದ್ಯೆ ಡಾ.ಜ್ಯೋತಿ ಹೆಗಡೆ, ಲ್ಯಾಬ್ ಟೆಕ್ನಿಶಿಯನ್ ಪ್ರದೀಪ ತಿರುಮಲೆಯವರು ಭಾಗವಹಿಸಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಜಯಂತಿ ಶಾನಭಾಗ್ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಪ್ರಾಚಾರ್ಯ ಡಾ.ಎಸ್.ಗುತ್ತಿಕರ್, ಯುವ ರೆಡ್ಕ್ರಾಸ್ ಘಟಕದ ಯೋಜನಾಧಿಕಾರಿಯಾದ ಸಾಗರ ಪಾಟೀಲರವರು, ಆಸ್ಪತ್ರೆಯ ಸಿಬ್ಬಂದಿ ಇದ್ದರು.
ಎನ್.ಎಸ್.ಎಸ್. ಘಟಕದ ಯೋಜನಾಧಿಕಾರಿಯಾದ ಪ್ರೊ.ಬಸಲಿಂಗಪ್ಪ ಅರವಳದರವರು ಸ್ವಾಗತಿಸಿದರು. ಪ್ರೊ.ಕಿರಣಕುಮಾರ್ ವಿ.ವಂದಿಸಿದರು. 40 ಮಂದಿ ರಕ್ತದಾನ ಮಾಡಿದರು. ರಕ್ತದಾನ ಮಾಡಿದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು. ರಕ್ತದಾನ ಶಿಬಿರ ಆಯೋಜನೆ ಮಾಡಿದ ಮಹಾವಿದ್ಯಾಲಯಕ್ಕೆ, ಸಾರ್ವಜನಿಕ ತಾಲೂಕು ಆಸ್ಪತ್ರೆ ಮತ್ತು ಬ್ಲಡ್ ಬ್ಯಾಂಕ್ ಶಿರಸಿ ಇದರ ವತಿಯಿಂದ ಪ್ರಶಂಸಾ ಪ್ರಮಾಣ ಪತ್ರವನ್ನು ನೀಡಲಾಯಿತು.