ಕುಮಟಾ: ಪಟ್ಟಣದ ಕೊಂಕಣ ಎಜ್ಯುಕೇಷನ್ ಟ್ರಸ್ಟ್‍ನ ಬಿ.ಕೆ.ಭಂಡಾರಕರ ಸರಸ್ವತಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ 2020-21 ನೇ ಸಾಲಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ವಾಣಿಜ್ಯ ವಿಭಾಗದ ಒಟ್ಟೂ 35 ವಿದ್ಯಾರ್ಥಿಗಳಲ್ಲಿ ಶಾಂತಿಕಾ ಉಪಾಧ್ಯ ಶೇ.99.17, ಸ್ವಾತಿ ಜಿ. ಬಾಳಗಿ ಶೇ. 96.83 ಹಾಗೂ ಅನಿರುದ್ಧ ಭಟ್ಟಕೇರೆ ಶೇ.95.33 ಅಂಕ ಪಡೆದು ಕಾಲೇಜಿಗೆ ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಉಳಿದಂತೆ 13 ಕ್ಕಿಂತ ಅಧಿಕ ವಿದ್ಯಾರ್ಥಿಗಳು ಶೇ. 90 ಕ್ಕಿಂತ ಹೆಚ್ಚು ಅಂಕ ಹಾಗೂ ಉಳಿದ ವಿದ್ಯಾರ್ಥಿಗಳು ಪ್ರಥಮ ವರ್ಗದಲ್ಲಿ ಉತ್ತೀರ್ಣರಾಗಿ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಕೊಂಕಣ ಎಜ್ಯುಕೇಷನ್ ಟ್ರಸ್ಟ್‍ನ ಅಧ್ಯಕ್ಷರು, ಸಕಲ ವಿಶ್ವಸ್ಥರು, ತ್ರಿಶಾ ಕ್ಲಾಸಸ್ ಮತ್ತು ಪ್ರಾಚಾರ್ಯ ಮಹೇಶ ಉಪ್ಪಿನವರು ಹಾಗೂ ಕೊಂಕಣದ ಸಕಲ ಉಪನ್ಯಾಸಕ ವೃಂದದವರು, ಮುಖ್ಯಾಧ್ಯಾಪಕರುಗಳು, ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.