
ನವದೆಹಲಿ: ಜುಲೈ 21 ರಿಂದ ಆಗಸ್ಟ್ 15 ರ ವರೆಗೂ ಕೆಂಪು ಕೋಟೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷೆ ತಿಳಿಸಿದೆ.
ಇಂದು ಮುಂಜಾನೆಯಿಂದ ಆಗಸ್ಟ್ ತಿಂಗಳ 15 ರ ವರೆಗೂ ಕೆಂಪು ಕೋಟೆಗೆ ಸಾರ್ವಜನಿಕರಿಗೆ ಪ್ರವೇಶ ಇಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಕೊರೋನಾ ಎರಡನೇ ಅಲೆ ದೇಶವನ್ನು ಸಂಕಷ್ಟಕ್ಕೆ ಒಳಗಾಗಿಸಿದೆ. ಈ ಹಿನ್ನೆಲೆಯಲ್ಲಿ ನವದೆಹಲಿ ಪೆÇಲೀಸರು ಸಾಂಕ್ರಾಮಿಕ ಸೋಂಕು ಕೋವಿಡ್ ಹರಡುವ ಭೀತಿಯಿಂದ ಮತ್ತು ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಆಗಸ್ಟ್ 15 ರ ವರೆಗೂ ಕೆಂಪು ಕೋಟೆಗೆ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡದಂತೆ ಪತ್ರ ಬರೆದಿದ್ದರು. ಈ ಪತ್ರವನ್ನು ಪರಿಗಣಿಸಿ ಇಲಾಖೆ ಈ ಕ್ರಮ ಕೈಗೊಂಡಿದೆ.
ನ್ಯೂಸ್ 13