ಶಿರಸಿ: ಮಹಾರಾಷ್ಟ್ರದ ಪುಣೆಯ ಖಗೋಳಶಾಸ್ತ್ರದಲ್ಲಿ ರಾಷ್ಟ್ರಮಟ್ಟದ ಉನ್ನತ ಶಿಕ್ಷಣ ಸಂಸ್ಥೆಯಾದ “ಇಂಟರ್ ಯುನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರೋನಮಿ ಅಂಡ್ ಆಸ್ಟ್ರೋಫಿಸಿಕ್ಸ್ (ಐಯುಕಾ) (Inter-University Centre for Astronomy and Astrophysics- IUCAA)” ದವರು ನಡೆಸುವ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಇಲ್ಲಿನ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿ.ಎಸ್ಸಿ. ಅಂತಿಮ ವರ್ಷದಲ್ಲಿ ಓದುತ್ತಿರುವ ಕಾರ್ತಿಕೇಯ ದತ್ತಾತ್ರೇಯ ಹೆಗಡೆ ಆಯ್ಕೆಗೊಂಡು ಸ್ನಾತಕೋತ್ತರ ಪದವಿಗೆ ಆಯ್ಕೆಯಾಗಿದ್ದಾನೆ.
ಇವನು ಧಾರವಾಡದ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಆಗಿರುವ ಗುಂಡಿಗದ್ದೆ-ಹುಳಗೋಳದ ದತ್ತಾತ್ರೇಯ ಹೆಗಡೆ ಹಾಗೂ ಸುಮಿತ್ರಾ ಹೆಗಡೆಯವರ ಪುತ್ರನಾಗಿದ್ದು, ವಿದ್ಯಾರ್ಥಿಯ ಈ ಸಾಧನೆಗೆ ಎಂಇಎಸ್ ನ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಎಂಇಎಸ್ ನ ಪದಾಧಿಕಾರಿಗಳು, ಉಪಸಮಿತಿ ಅಧ್ಯಕ್ಷ ಎಸ್. ಕೆ. ಭಾಗವತ್, ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊಫೆಸರ್ ಜಿ. ಟಿ. ಭಟ್, ಬೋಧಕ, ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.