ಆರ್ಥಿಕವಾಗಿ ರೈತರನ್ನು ಬಲಿಷ್ಟಗೊಳಿಸಿದ ಕೀರ್ತಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ನದ್ದು | ತಂತ್ರಜ್ಞಾನದಲ್ಲಿ ಮುಂದುವರೆದ ಆಧುನಿಕತೆ ವ್ಯವಸ್ಥೆಯ ರೂವಾರಿ
ಯಾವುದೇ ಆಗಿರಲಿ, ಕಟ್ಟುವುದು ಕಷ್ಟ.. ಕೆಡಿಸುವುದು ಸುಲಭ. ಯಾರಾದರೂ ಸ್ವತಃ ಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿದರೆ ಮಾತ್ರ ಅದರ ಪರಿಶ್ರಮ ತಿಳಿಯುತ್ತದೆ. ಬೇರೆಯವರು ಕಟ್ಟಿದ ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವುದು ಬಲು ಸುಲಭ. ಆದರೆ ಸ್ವಂತದ್ದಾಗಿ ಕಟ್ಟಿದರೆ ಮಾತ್ರ ಅದರ ಶ್ರಮ, ಪರಿಶ್ರಮದ ಲೆಕ್ಕಾಚಾರ ತಿಳಿಯುವುದು. ಅದರಲ್ಲಿಯೂ ಬ್ಯಾಂಕಿಂಗ್ ಕ್ಷೇತ್ರದಷ್ಟು ಸೂಕ್ಷ್ಮ ಇನ್ನೊಂದಿಲ್ಲ. ಆರ್ಥಿಕವಾಗಿ ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಕಾಗುವುದಿಲ್ಲ. ಅದರಲ್ಲಿಯೂ ಉತ್ತರ ಕನ್ನಡದಂತಹ ಜಿಲ್ಲೆಯಲ್ಲಿ ಸಹಕಾರಿ ವ್ಯವಸ್ಥೆಯನ್ನು ಬಲಗೊಳಿಸಿದ ಕೀರ್ತಿ ಇಲ್ಲಿಯ ಜನತೆಯ ಜೊತೆಗೆ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಗೆ ಸಲ್ಲಬೇಕು. ತಾನೊಂದು ಆರ್ಥಿಕ ಕೇಂದ್ರವಾಗಿ ತನ್ನ ಸಹವರ್ತಿಗಳ ನಿರಂತರ ಅಭ್ಯುದಯಕ್ಕಾಗಿ, ಅಭಿವೃದ್ಧಿಗೆ ಶ್ರಮಿಸಿದ್ದರ ಫಲವೇ ಇಂದು ಜಿಲ್ಕೆಹ ಮೂಲೆಯಲ್ಲಿರುವ ಚಿಕ್ಕ ಸಹಕಾರಿ ಸಂಘವೂ ಕೂಡ ಸ್ವಂತ ಕಟ್ಟಡ, ಸುವ್ಯವಸ್ಥಿತವಾದ ವಾತಾವರಣ ಹೊಂದಿರುವುದು.
ಭಾರತದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗಳು ಬಂದು ಮೂರು ದಶಕಗಳೇ ಕಳೆದುಹೋಗಿದೆ. ಬ್ಯಾಂಕಿಂಗ್ ಎಂದರೆ ದೊಡ್ಡ ದೊಡ್ಡ ಲೆಡ್ಜರ್ ಗಳು ಕಣ್ಮುಂದೆ ಬರುತ್ತಿದ್ದಂತಹ ನೆನಪುಗಳೂ ಸಹ ಇಂದು ಮಾಸಿ ಹೋಗಿದೆ. ಎಲ್ಲಾ ಬ್ಯಾಂಕ್ಗಳಂತೆಯೇ ಲೆಡ್ಜರ್ ಗಳಿಂದ ಆರಂಭಗೊಂಡಿದ್ದ ಕೆನರಾ ಡಿ.ಸಿ.ಸಿ. ಬ್ಯಾಂಕಿನ ಕಾರ್ಯಚಟುವಟಿಕೆ ಕೋರ್ ಬ್ಯಾಂಕಿಂಗ್ ನವರೆಗೆ ಸಾಗಿ ಬಂದಿದ್ದು ಈಗ ಇತಿಹಾಸ. 2012 ರಿಂದ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಕೆನರಾ ಡಿ.ಸಿಸಿ ಬ್ಯಾಂಕ್ ತಂತ್ರಜ್ಞಾನಾಧಾರಿತ ಸೇವೆಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಯಶಸ್ಸನ್ನು ಸಾಧಿಸಿದೆ.
ಕೃಷಿಯನ್ನೇ ಆಧಾರವಾಗಿಟ್ಟುಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಕೆಡಿಸಿಸಿ ಬ್ಯಾಂಕ್ ಎಂಬುದು ಒಂದು ನಂಬಿಕೆ. ಕಷ್ಟಕಾಲದಲ್ಲಿ ರೈತರನ್ನು ಉಳಿಸಿ, ಅವರ ಜೀವನವನ್ನು ಸುಭದ್ರಗೊಳಿಸಿದ ಹೆಮ್ಮೆ ಸಹ ಕೆಡಿಸಿಸಿ ಬ್ಯಾಂಕ್ ಗೆ ಸಲ್ಲಬೇಕು. ರೈತಸ್ನೇಹಿಯಾಗಿ, ಅರ್ಥಿಕ ಶಕ್ತಿಯಾಗಿರುವ ಕೆಡಿಸಿಸಿ ತನ್ನ ತಂತ್ರಜ್ಞಾನಗಳನ್ನು ಕಾಲಕಾಲಕ್ಕೆ ಬದಲಾಯಿಸಿಕೊಂಡು, ಸಾಮಾನ್ಯ ವ್ಯಕ್ತಿಗೆ ಆರ್ಥಿಕ ಶಕ್ತಿಯಾಗಿ ರೂಪುಗೊಂಡಿದ್ದು ಇತಿಹಾಸವೇ ಸರಿ.
ಕೋರ್ ಬ್ಯಾಂಕಿಂಗ್ ಸಲ್ಯೂಷನ್ (CBS)
ಬ್ಯಾಂಕಿನ ಯಾವುದೇ ಶಾಖೆಯಿಂದ ಬ್ಯಾಂಕಿಗ್ ಸೇವೆಗಳನ್ನು ಪಡೆಯಲು ಹಾಗೂ ತಮ್ಮ ಖಾತೆಗಳನ್ನು ನಿರ್ವಹಿಸಲು ಸಿ.ಬಿ.ಎಸ್. ವ್ಯವಸ್ಥೆ ಅನುವು ಮಾಡಿಕೊಡುತ್ತದೆ. ಗ್ರಾಹಕರು ತಮ್ಮ ಖಾತೆಯನ್ನು ಜಿಲ್ಲೆಯ ಯಾವುದೇ ಶಾಖೆಯಲ್ಲಿ ನಿರ್ವಹಿಸಬಹುದು ಎಂಬುದು ಕೋರ್ ಬ್ಯಾಂಕಿಂಗ್ ಮುಖ್ಯ ಧನಾತ್ಮಕ ಅಂಶವಾಗಿದೆ. ಕೆನರಾ ಡಿ. ಸಿ. ಸಿ. ಬ್ಯಾಂಕಿನ ಎಲ್ಲಾ ಶಾಖೆಗಳನ್ನು ಸಿಬಿಎಸ್ ಅಡಿಯಲ್ಲಿ ತರಲಾಗಿದೆ. ಅನೇಕ ಬ್ರ್ಯಾಂಚ್ ಗಳು ಸ್ವಂತ ಕಟ್ಟಡದಲ್ಲಿ ಬ್ಯಾಂಕ್ ಎಟಿಎಂಗಳನ್ನು ಹೊಂದಿವೆ. ಮೊಬೈಲ್ ATM ವ್ಯಾನ್ ಮೂಲಕ ಬ್ಯಾಂಕಿಂಗ್ ಸೇವೆಯನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಲಾಗಿದೆ.
ಸಂಪರ್ಕ (CONNECTIVITY):
VSAT, ಲೀಸ್ಡ್ ಲೈನ್, ISDN ಲೈನ್, RF, CDMA, WIMAX, MPLS, ಮುಂತಾದ ಹಲವು ವಿಧದ ಸಂಪರ್ಕಗಳಿವೆ. ASP (Application Service Provider) ನೆಟ್ವರ್ಕ್ ಸಂಪರ್ಕಗಳನ್ನು ಒದಗಿಸಿದೆ. ಬ್ಯಾಂಕು ಎರಡು ನೆಟ್ವರ್ಕ್ ಸಂಪರ್ಕಗಳನ್ನು (ಪ್ರಾಥಮಿಕ / ಸೆಕೆಂಡರಿ) ಹೊಂದಿದ್ದು, ಯಾವುದೇ ಕಾರಣಕ್ಕಾಗಿ ಮೊದಲ ನೆಟ್ವರ್ಕ್ ಸಂಪರ್ಕ ವಿಫಲವಾದರೆ, ಸೆಕೆಂಡರಿ ನೆಟ್ವರ್ಕ್ ಸಂಪರ್ಕದ ಸಹಾಯದಿಂದ ಶಾಖೆಯು ಸುಗಮವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಎರಡು ನೆಟ್ವರ್ಕ್ ಸಂಪರ್ಕಗಳ ಉದ್ದೇಶವಾಗಿದೆ.
ಕೆನರಾ ಡಿ. ಸಿ. ಸಿ. ಬ್ಯಾಂಕ್ ನಲ್ಲಿ ತಂತ್ರಜ್ಞಾನ ಅಳವಡಿಕೆ : ಕೆನರಾ ಡಿ. ಸಿ. ಸಿ. ಬ್ಯಾಂಕ್ನಲ್ಲಿ ಗ್ರಾಹಕರಿಗೆ ಮುಖ್ಯವಾಗಿ ಈ ಕೆಳಗಿನ ತಂತ್ರಜ್ಞಾನಾಧಾರಿತ ಸೇವೆಗಳನ್ನು ನೀಡಲಾಗುತ್ತಿದೆ.
NEFT (National Electronic Funds Transfer):
ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್ ಗಳ ವರ್ಗಾವಣೆ (NEET) ಯು ಪಾವತಿ ವ್ಯವಸ್ಥೆಯಾಗಿದ್ದು, ಹಣದ ವರ್ಗಾವಣೆ ವಹಿವಾಟು ಅರ್ಧ ಗಂಟೆಯ ಬ್ಯಾಚ್ಗಳಲ್ಲಿ ನಡೆಯುತ್ತದೆ. ಯಾವುದೇ ಮೊತ್ತವನ್ನು ಬೇರೆ ಬ್ಯಾಂಕಿನ ಖಾತೆಗಳಿಗೆ ಈ ವ್ಯವಸ್ಥೆಯಲ್ಲಿ ವರ್ಗಾಯಿಸಬಹುದಾಗಿದೆ.
RTGS (Real Time Gross Settlement):
ರಿಯಲ್ ಟೈಮ್ ಗ್ರಾಸ್ ಸೆಟ್ಲಮೆಂಟ್ (RTGS) ಇದೂ ಸಹ ಒಂದು ಪಾವತಿ ವ್ಯವಸ್ಥೆಯಾಗಿದ್ದು, ಎರಡು ಲಕ್ಷ ಅಥವಾ ಹೆಚ್ಚಿನ ರಖಂನ್ನು ಈ ವ್ಯವಸ್ಥೆ ಮೂಲಕ ತ್ವರಿತವಾಗಿ ವರ್ಗಾವಣೆಗೆ ಬಳಸಿಕೊಳ್ಳಲಾಗುತ್ತದೆ. ಪ್ರಸ್ತುತ, NEFT ಮತ್ತು RTGS ವ್ಯವಸ್ಥೆಯು ದಿನದ 24 ತಾಸುಗಳಲ್ಲೂ ಕಾರ್ಯನಿರ್ವಹಿಸುತ್ತಿದೆ. ಕೆನರಾ ಡಿ. ಸಿ. ಸಿ. ಬ್ಯಾಂಕು ಪ್ರಾಯೋಜಕ ಬ್ಯಾಂಕ್ ಮಾಡ್ಯೂಲ್ ಅಡಿಯಲ್ಲಿ RTGS/NEFT ಅನ್ನು ಪ್ರಾರಂಭಿಸಿದ್ದು, ಈ ಸೌಲಭ್ಯಕ್ಕಾಗಿ KSC ಅಪೆಕ್ಸ್ ಬ್ಯಾಂಕ್ ಅನ್ನು ಪ್ರಾಯೋಜಕ ಬ್ಯಾಂಕ್ ಆಗಿ ಆಯ್ಕೆ ಮಾಡಿಕೊಂಡಿದೆ. ದಿನಾಂಕ : 14-07-2014ರಿಂದ ಈ ಸೇವೆಯನ್ನು ನಮ್ಮ ಕೆನರಾ ಡಿ. ಸಿ. ಸಿ. ಬ್ಯಾಂಕ್ನಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಇದರಿಂದ ಡಿಜಿಟಲ್ ಪಾವತಿ ವಹಿವಾಟುಗಳು ವೇಗವಾಗಿ ನಡೆಯುತ್ತಿವೆ.
Ref : ಶತಮಾನದ ಸಂಭ್ರಮ
ಮುಂದುವರೆಯುವುದು..