ದಾಂಡೇಲಿ : ನಗರದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಬಿಜೆಪಿ ಸಂಸ್ಥಾಪನ ದಿನಾಚರಣೆಯನ್ನು ಭಾನುವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಡಾ.ಶ್ಯಾಮಪ್ರಸಾದ ಮುಖರ್ಜಿ ಹಾಗೂ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪಕ್ಷದ ಕಾರ್ಯಾಲಯದ ಮೇಲೆ ಮೇಲೆ ಪಕ್ಷದ ಬಾವುಟವನ್ನು ಹಾರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷರಾದ ಬುದವಂತ ಗೌಡ ಪಾಟೀಲ್, ಪಕ್ಷದ ಮುಖಂಡರುಗಳಾದ ರೋಷನ್ ನೇತ್ರಾವಳಿ, ಸುಧಾಕರ್ ರೆಡ್ಡಿ, ಮಿಥುನ್ ನಾಯಕ, ಗೀತಾ ಶಿಕಾರಿಪುರ, ವಿಜಯ ಕೊಲೇಕರ, ಪ್ರಮೋದ್ ಕದಂ, ಸಂತೋಷ ಬುಲುಬುಲೆ, ಹನುಮಂತ ಕಾರ್ಗಿ, ರಮಾ ರವೀಂದ್ರ, ಪದ್ಮಜಾ ಪ್ರವೀಣ್ ಜನ್ನು, ಬಸವರಾಜ ಹುಂಡೇಕರ ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.