ಶಿರಸಿ: ಆಕಾಶವಾಣಿ ಪ್ರಸಾರ ಭಾರತಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಭಾರತ ಸರಕಾರ ಹಿಂದುಸ್ತಾನಿ ವಾದ್ಯಸಂಗೀತ ತಬಲಾ ವಿಭಾಗದಲ್ಲಿ ‘A’ ಶ್ರೇಣಿಯ ಮಾನ್ಯತೆಯು ಅನಂತ ಹೆಗಡೆ ವಾಜಗಾರ ಇವರಿಗೆ ದೊರಕಿದೆ.
ತಬಲಾ ವಾದನ ಕ್ಷೇತ್ರದಲ್ಲಿ ಜಿಲ್ಲೆಗೆ ಪ್ರಥಮ A ಗ್ರೇಡ್ ಮಾನ್ಯತೆ ಬಂದಿರುವುದು ಉಲ್ಲೇಖನೀಯವಾಗಿದೆ. ಅನಂತ ಹೆಗಡೆ ಇವರು ಸಂಹಿತಾ ಮ್ಯೂಸಿಕ್ ಫೋರಂ ಸಂಸ್ಥೆಯ ಮೂಲಕ ಹಲವಾರು ವಿದ್ಯಾರ್ಥಿಗಳಿಗೆ ತಬಲಾ ವಾದನ ತರಬೇತಿಯನ್ನು ನೀಡುತ್ತಿದ್ದಾರೆ.