ದಾಂಡೇಲಿ : ನಗರದ ನಿರ್ಮಲ ನಗರದಲ್ಲಿ ಯುವತಿಯೋರ್ವಳು ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.
ಸ್ಥಳೀಯ ನಿರ್ಮಲ ನಗರದ ನಿವಾಸಿ 17 ವರ್ಷ ವಯಸ್ಸಿನ ಅನುಲುಸ್ಮಾ ಯಾನೆ ಆಸ್ಮಾ ಸೈಯದವುದ್ದೀನ್ ಯಹೀಯಾ ಎಂಬವಳೇ ಮೃತಪಟ್ಟ ಅವಿವಾಹಿತ ಯುವತಿಯಾಗಿದ್ದಾಳೆ. ಈಕೆಯ ಸಾವಿನ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿ ತನಿಖೆಗಾಗಿ ಮೃತಳ ತಾಯಿ ತಬಸುಮ್ ಅವರು ದಾಂಡೇಲಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.