ದಾಂಡೇಲಿ : ತಾಲೂಕಿನ ಬರ್ಚಿ – ಗಣೇಶಗುಡಿ ರಸ್ತೆಯಲ್ಲಿ ಜೋಡಿ ಹುಲಿಗಳು ಪ್ರತ್ಯಕ್ಷವಾಗಿ ರಸ್ತೆಯಲ್ಲಿ ಸಾಗುತ್ತಿರುವ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿರುವ ಬಗ್ಗೆ ಶುಕ್ರವಾರ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ.
ಸುತ್ತಲೂ ದಟ್ಟ ಅರಣ್ಯ ಅದರ ಮಧ್ಯೆ ಬರ್ಚಿ – ಗಣೇಶಗುಡಿ ರಸ್ತೆ ಹಾದು ಹೊಗಿದ್ದು, ಅರಣ್ಯ ದಂಚಿನಲ್ಲಿರುವ ಈ ರಸ್ತೆಯಲ್ಲಿ ಆನೆ, ಕರಡಿಗಳ ಸಾಮಾನ್ಯವಾಗಿ ಕಂಡುಬರುತ್ತದೆ. ಅಪರೂಪಕ್ಕೆ ಎಂಬಂತೆ ಇದೀಗ ಹುಲಿಗಳ ದರ್ಶನವಾಗಿದೆ. ಹುಲಿಗಳು ರಸ್ತೆ ದಾಟುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ.