ಯಲ್ಲಾಪುರ: ತಾಲೂಕಿನ ಕನ್ನಡಗಲ್ ಮಾವಳ್ಳಿಯಲ್ಲಿ ಐದು ವರ್ಷಗಳಿಗೊಮ್ಮೆ ನಡೆಯುವ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವ ದೇವಿಯರ ಮೆರವಣಿಗೆಯೊಂದಿಗೆ ಅದ್ದೂರಿಯಾಗಿ ಆರಂಭವಾಯಿತು.
ಮಧ್ಯಾಹ್ನ ವಿಶೇಷ ಪೂಜೆ, ಜಾತ್ರಾ ವಿಧಿ ವಿಧಾನಗಳ ನಂತರ ಮೆರವಣಿಗೆಯಲ್ಲಿ ಭಕ್ತರು ದೇವಿಯರನ್ನು ತಲೆಯ ಮೇಲೆ ಹೊತ್ತು ಸಾಗಿದರು. ಚಂಡೆಯ ಅಬ್ಬರ, ವಿವಿಧ ವಾದ್ಯಗಳ ಜೊತೆ, ಭಕ್ತರ ಜಯಘೋಷಗಳೊಂದಿಗೆ ಜಾತ್ರಾ ಮಂಟಪದತ್ತ ತೆರಳಿದ ಕಾಳಮ್ಮ-ದುರ್ಗಮ್ಮ ಮಂಟಪದಲ್ಲಿ ವಿರಾಜಮಾನರಾದರು. ಫೆ.27ರವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವದಲ್ಲಿ ನಾಳೆಯಿಂದ ಹಣ್ಣುಕಾಯಿ, ಉಡಿ ಸೇವೆ ಆರಂಭವಾಗಲಿದೆ.