Slide
Slide
Slide
previous arrow
next arrow

ಫೆ.23ಕ್ಕೆ ಪ್ರಖ್ಯಾತ ಕಲಾವಿದರಿಂದ “ಸ್ವರ ಲಯ ಲಹರಿ”

300x250 AD

ಶಿರಸಿ: ಸಪ್ತಕ ಬೆಂಗಳೂರು ಹಾಗೂ ಸ್ಥಳೀಯ ಸಂಸ್ಥೆಯಾದ ವತನ ಕಲಾ ಕುಸುಮ  ಸಹಯೋಗದಲ್ಲಿ ಸ್ವರ ಲಯ ಲಹರಿ ಕಾರ್ಯಕ್ರಮವು ಫೆ. 23ರಂದು ಸಾಯಂಕಾಲ 5:30ಕ್ಕೆ ನೆಮ್ಮದಿ ಆವರಣದ ರಂಗಧಾಮದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ದೇಶ ವಿದೇಶದಲ್ಲಿ ಹೆಸರು ಮಾಡಿದಂತಹ ಓಜಸ್ ಅಧಿಯಾ, ಮುಂಬೈ ಅವರ ತಬಲಾ ಸೋಲೋ ಕಾರ್ಯಕ್ರಮ ನಡೆಯಲಿದೆ. ಹಾಗೆಯೇ ಶ್ರೀಮತಿ ವೀಣಾ ಮೊಪ್ಕಾರ, ಗೋವಾ ಇವರ ಗಾಯನ ಕಾರ್ಯಕ್ರಮ ಇರುತ್ತದೆ. ಈ ಕಾರ್ಯಕ್ರಮಕ್ಕೆ ಸಹಕಲಾವಿದರಾಗಿ ಅಮರ್ ಮೊಪ್ಕಾರ ಗೋವಾ, ಸಿದ್ದೇಶ್ ಬಿಚೋಲ್ಕರ್ ಮುಂಬೈ ಹಾಗೂ ಭರತ್ ಹೆಗಡೆ, ಹೆಬ್ಬಲಸು ಸಹಕರಿಸಲಿದ್ದಾರೆ.
ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಲೆಯನ್ನು ಆಸ್ವಾದಿಸಲು ಸಂಚಾಲಕರಾದ  ಜಿ.ಎಸ್. ಹೆಗಡೆ, ಬೆಂಗಳೂರು ಹಾಗೂ ಮನು ಹೆಗಡೆ ಪುಟ್ಟನಮನೆ ವಿನಂತಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top