ಸಿದ್ದಾಪುರ: ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿಜ್ಞಾನ ಮತ್ತು ತಾಂತ್ರಿಕ ವಸ್ತು ಪ್ರದರ್ಶನ ನಡೆಯಿತು.
ಬಿಇಒ ಎಂ.ಎಚ್.ನಾಯ್ಕ ಕಾಲೇಜಿನ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಸಿದ್ದಪಡಿಸಿದ ತಾಂತ್ರಿಕ ಮಾದರಿಗಳ ಹಾಗೂ ವೈಜ್ಞಾನಿಕ ಪರಿಕಲ್ಪನೆಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಉದ್ಘಾಟಿಸಿದರು.
ಟಿಎಂಎಸ್ ಅಧ್ಯಕ್ಷ ಆರ್. ಎಂ. ಹೆಗಡೆ ಬಾಳೇಸರ, ಬೇಡ್ಕಣಿ ಜನತಾ ವಿದ್ಯಾಲಯದ ಗಣಿತ ಶಿಕ್ಷಕ ಜಿ. ಟಿ. ಹೆಗಡೆ, ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿಭಾಗಾಧಿಕಾರಿ ವಿನಯ್ ಭಟ್ಟ ಉಪಸ್ಥಿತರಿದ್ದರು.
ಸುಮಾ ,ಭಾಗ್ಯ ನಾಯ್ಕ, ಪ್ರಥಮ್, ದೀಕ್ಷಿತ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ಸಿದ್ದಾಪುರದಲ್ಲಿ ವಿಜ್ಞಾನ, ತಾಂತ್ರಿಕ ವಸ್ತು ಪ್ರದರ್ಶನ
