ಸಿದ್ದಾಪುರ: ತಾಲೂಕಿನ ಕಲಗದ್ದೆಯ ಶ್ರೀ ನಾಟ್ಯವಿನಾಯಕ, ಲಲಿತಾ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಫೆ.16, ಭಾನುವಾರದಂದು ಇಷ್ಟಾರ್ಥ ಸಿದ್ದಿಗೆ ಮಹಾಗಣಪತಿಗೆ ಲಕ್ಷ ಪುಷ್ಪಾರ್ಚನೆ ನೂರೊಂದು ಕುಂಭದಲ್ಲಿ ಕ್ಷೀರಾಭಿಷೇಕ, ವಿಶೇಷ ಪೂಜೆ, ಹವನ, ರಥೋತ್ಸವ, ಸಂತರ್ಪಣೆಯನ್ನು ಸಂಕಲ್ಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಮಂಗಳೂರಿನ ಒಮೇಗಾ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಮುಕುಂದ್ ಕುಂಬ್ಳೆ ಇವರಿಗೆ ಗೌರವ ಸನ್ಮಾನ ನೆರವೇರಲಿದೆ. ಅತಿಥಿಗಳಾಗಿ ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಸಿದ್ದಾಪುರಶ್ರೇಯಸ್ ಆಸ್ಪತ್ರೆಯ ಡಾ.ಶ್ರೀಧರ ವೈದ್ಯ ಆಗಮಿಸಲಿದ್ದಾರೆ.
ಸೇವೆಯಲ್ಲಿ ಒಂದು ಪುಷ್ಪಕ್ಕೆ 1 ರೂ.ನಂತೆ ಮನಸ್ಸಿನ ಸಂಕಲ್ಪದಷ್ಟು ಪಾವತಿಸಲು ಅವಕಾಶವಿದ್ದು, ವಿವರಗಳಿಗೆ Tel:+919448756263 ಸಂಪರ್ಕಿಸಲು ಕೋರಿದೆ.