ಶಿರಸಿ: ತಾಲೂಕಿನ ಗೋಳಿಯ ಮಂಜಪ್ಪನಮುರ್ಕಿ ಗ್ರಾಮದಲ್ಲಿ, ಮಹಾದೇವಿ ಸುಧಾರಕ ಮಡಿವಾಳ ಎನ್ನುವವರ ಮನೆಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಬುಧವಾರ ನಡೆದಿದ್ದು, ಅವರ ಮನೆಗೆ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಭೇಟಿ ನೀಡಿ ಸಂಕಷ್ಟದಲ್ಲಿ ಇದ್ದ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ.
ಘಟನೆಯಲ್ಲಿ ಮನೆಯಲ್ಲಿ ಇದ್ದ ಟಿವಿ,ಫ್ರಿಜ್ ಬಟ್ಟೆ ಎಲ್ಲವೂ ಸಂಪೂರ್ಣ ಸುಟ್ಟು ಹೋಗಿದೆ. ಮಹಾದೇವಿ ಮಡಿವಾಳ ಅವರ ಮಗ ನಾಗರಾಜ ಮದುವೆಗೆ ಕೂಡಿ ಇಟ್ಟಿದ್ದ 1.5 ಲಕ್ಷ ರೂಪಾಯಿ ಹಣ ಹಾಗೂ ಬಂಗಾರ ಕೂಡ ಸುಟ್ಟು ಹೋಗಿದ್ದು, ಹಾಕಿದ್ದ ಬಟ್ಟೆ ಬಿಟ್ಟರೆ ಬೇರೆ ಏನು ಉಳಿದಿಲ್ಲ ಎಂದು ತಮ್ಮ ನೋವನ್ನು ಮನೆಯವರು ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಜ್ಯೋತಿ ಸುಬ್ರಾಯ ಹೆಗಡೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.