ಹಳಿಯಾಳ : ಮೀಟರ್ ಬಡ್ಡಿಯವರ ಕಿರುಕುಳಕ್ಕೊಳಗಾಗಿ ಅನಾರೋಗ್ಯ ಪೀಡಿತನಾಗಿ ಹಾಸಿಗೆ ಹಿಡಿದಿರುವುದರ ಜೊತೆಗೆ ಮಗನ ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸಿದ ದಯಾನೀಯ ಸ್ಥಿತಿಯೊಂದು ಪಟ್ಟಣದ ಕಸಬಾಗಲ್ಲಿಯಲ್ಲಿ ಕಂಡು ಬಂದಿದೆ.
ಪಟ್ಟಣದ ಕಸಬಾಗಲ್ಲಿ ನಿವಾಸಿ ಲಿಯಾಖತ ಅಬ್ದುಲ್ ರಜಾಕ್ ಬುಡ್ಡೆಸಾಬ್ ನವರ ಎಂಬುವವರೇ ದಯನೀಯ ಸ್ಥಿತಿಯಲ್ಲಿರುವ ವ್ಯಕ್ತಿಯಾಗಿದ್ದಾರೆ. ಇವರು ರೇಣುಕಾ ಎಂಬ ಮಹಿಳೆಯಿಂದ 2023 ಅಕ್ಟೊಬರ್ ತಿಂಗಳಿನಲ್ಲಿ 3 ಲಕ್ಷ ರೂ ಹಣವನ್ನು 15% ನಂತೆ ಮೀಟರ್ ಬಡ್ಡಿ ರೂಪದಲ್ಲಿ ಪಡೆದಿದ್ದರು.
ಇವರಿಂದ ಪ್ರತಿ ತಿಂಗಳು 45 ಸಾವಿರ ರೂ ಹಣವನ್ನು ಬಡ್ಡಿರೂಪದಲ್ಲಿ ರೇಣುಕಾ ಪಡೆಯುತ್ತಿದ್ದಳು. ಪ್ರತಿದಿನ ಲಿಯಾಖತ್ ಅವರ ಕುಟುಂಬವೆಲ್ಲ ದುಡಿದ ಹಣ ಬಡ್ಡಿಗೆ ಕೊಡುವುದಕ್ಕಾಗಿಯೆ ಸರಿ ಹೋಗುತ್ತಿತ್ತು. ಲಿಯಾಖತ ಅವರು ಮನೆಯಲ್ಲಿ ಇಲ್ಲದಿರುವ ಸಮಯದಲ್ಲಿ ಬಂದು ಗಲಾಟೆ ಮಾಡಿ ಯುನಿಯನ್ ಬ್ಯಾಂಕ್ ಖಾತೆಯ 6 ಚೆಕ್ ಗಳನ್ನು ದಬ್ಬಾಳಿಕೆಯಿಂದ ಪಡೆದು ಹೊಗಿದ್ದಾಳೆಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಈಕೆಯ ದಬ್ಬಾಳಿಕೆಗೆ ಈಗ ಸಧ್ಯ 2024 ಅಕ್ಟೊಬರ್ ನಿಂದ ಲಿಯಾಖತ ಎರಡು ಕಾಲುಗಳು ನಿಶ್ಯಕ್ತಗೊಂಡಿದ್ದು. ನಿರಂತರ ಆಸ್ಪತ್ರೆ ಅಲೆದಾಟ ಮಾಡುತ್ತಿದ್ದು ಲಕ್ಷಾಂತರ ರೂ. ಆಸ್ಪತ್ರೆಗೆ ಹಾಕುವ ಇನ್ನೊಂದು ಸಂಕಷ್ಟದ ಪರಿಸ್ಥಿತಿ ಅವರಿಗೆ ಬಂದಿದೆ. ಇಷ್ಟಾದರೂ ಸಹಿತ ರೇಣುಕಾಳ ದಬ್ಬಾಳಿಕೆ ನಿಂತಿಲ್ಲ. ಮನೆಗೆ ಮೇಲಿಂದ ಮೇಲೆ ಬಂದು ಬೆದರಿಕೆ ಹಾಕುತ್ತಿದ್ದಾಳೆ ಎಂದು ಲಿಯಾಖತ್ ಅವರು ಆರೋಪಿಸಿದ್ದಾರೆ
ಇದರಿಂದ ರೋಸಿ ಹೊಗಿರುವ ಕುಟುಂಬದಲ್ಲಿ ಲಿಯಾಖತನ ಮಗ ಮುಸ್ತಫಾ ತನ್ನ 8 ನೇ ತರಗತಿ ಶಿಕ್ಷಣ ಮೊಟಕುಗೊಳಿಸಿ ರೇಣುಕಾಳ ಬಡ್ಡಿ ಹಣ ಕಟ್ಟಲು ಕೂಲಿ ಕೆಲಸಕ್ಕೆ ಹೊಗುತ್ತಿದ್ದಾನೆ. ಇದರಿಂದ ಆ ವಿದ್ಯಾರ್ಥಿಯ ಭವಿಷ್ಯವು ಕತ್ತಲೆಯಲ್ಲಿ ಮುಳುಗುವ ಆತಂಕದಲ್ಲಿದೆ.