ಹೊನ್ನಾವರ: ತಾಲೂಕಿನ ಗೇರುಸೊಪ್ಪಾದ ಸುಳೆಮುರ್ಕಿ ಕ್ರಾಸ್ ಅಪಾಯಕಾರಿ ತಿರುವಾಗಿದ್ದು, ಹೆಚ್ಚಿನ ರಸ್ತೆ ಅಪಘಾತ ಸಂಭವಿಸುತ್ತಲೇ ಇರುತ್ತದೆ. ಶುಕ್ರವಾರ ಮತ್ತೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಶಿಲೆಕಲ್ಲು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿದೆ. ಅದೃಷ್ಟವಶಾತ್ ಚಾಲಕ ಹಾಗೂ ಕ್ಲೀನರ್ ಗೆ ಸಣ್ಣಪುಟ್ಟ ಗಾಯಗಳಾಗಿದೆ. ಶಿಲೆಕಲ್ಲು ತುಂಬಿದ ಲಾರಿ ಶಿವಮೊಗ್ಗದಿಂದ ಬಂದಿದ್ದು ಮುರ್ಡೆಶ್ವರದ ಕಡೆ ಹೋಗುವುದಾಗಿತ್ತು ಎನ್ನಲಾಗಿದೆ. ಚಾಲಕ ಹಾಗೂ ಕ್ಲೀನರ್ ನನ್ನು ಚಿಕಿತ್ಸೆಗೆ ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾರಿ ಪಲ್ಟಿ: ಚಾಲಕ,ಕ್ಲೀನರ್‌ಗೆ ಗಾಯ
