ಶಿರಸಿ: ಕಳೆದ ೨೫ ವರ್ಷದಿಂದ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ಜ.೩೧ ರಂದು ಸೇವಾ ನಿವೃತ್ತಿ ಹೊಂದಿ ಫೆ.೩ ರಂದು ಶಿರಸಿಗೆ ಆಗಮಿಸಿದ ಅಂತರಾಷ್ಟೀಯ ಕ್ರೀಡಾಪಟು ಕಾಶಿನಾಥ ಅವರಿಗೆ ಬೈಕ್ ರ್ಯಾಲಿ, ನಾಗರಿಕ ಸನ್ಮಾನ, ಬೃಹತ ಮೆರವಣಿಗೆ ಮೂಲಕ ವಿವಿಧ ಸಂಘಟನೆಗಳಿಂದ ಅಭಿನಂದನೆ ಕಾರ್ಯ ಜರುಗಿದವು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಶಿರಸಿ ಜಿಲ್ಲಾ ಘಟಕ, ಶಿರಸಿ ತಾಲೂಕು ದೈಹಿಕ ಶಿಕ್ಷಕರ ಸಂಘದ ನೇತೃತ್ವದಲ್ಲಿ ಶಿರಸಿಯ ಇತರ ಪ್ರಮುಖ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯಕ್ರಮ ಸಂಘಟಿಸಲಾಗಿತ್ತು.
ಗೌರವ ಸನ್ಮಾನ ಸ್ವೀಕರಿಸಿದ ಸುಬೇದಾರ್ ಕಾಶೀನಾಥ್ ನಾಯ್ಕ್ ಮಾತನಾಡಿ, ದೇಶರಕ್ಷಣೆಯಲ್ಲಿ ಸೈನಿಕ ಸೇವೆ ಪ್ರಾಮುಖ್ಯವಾಗಿದ್ದು, ಸೈನಿಕನ ಸೇವೆ ದೇಶ ಸೇವೆಯಲ್ಲಿ ಪವಿತ್ರವಾದದ್ದು. ಇಂದಿನ ಯುವಕರು ಸೇನೆಯ ಸೇವೆಗೆ ಆಸಕ್ತಿ ವಹಿಸಬೇಕು. ಇಂದಿನ ಯುವಕರಿಗೆ ಕ್ರೀಡೆಯ ಮೂಲಕವು ದೇಶ ಸೇವೆ ಮಾಡಲು ಅವಕಾಶವಿದೆ., ಸರ್ಕಾರ ಸೂಕ್ತ ತರಬೇತಿ ನೀಡಲು ಚಿಂತಿಸಬೇಕು ಎಂದು ಹೇಳಿದರು.
ನಗರ ಸಭೆ ಅಧ್ಯಕ್ಷರಾದ ಶರ್ಮಿಳಾ ಮಾದನಗೇರಿ ಅಧ್ಯಕ್ಷತೆ ವಹಿಸಿ ಸೇನೆಯ ಕಾರ್ಯ ಬಹಳ ಮಹತ್ವಪೂರ್ಣವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ನಿರ್ವಹಣೆ ವಿ.ಎಮ್.ಭಟ್ಟ್ ನಿರ್ವಹಿಸಿದರು. ಸ್ವಾಗತವನ್ನ ನೌಕರರ ಸಂಘ ಅಧ್ಯಕ್ಷ ಕಿರಣ ಕುಮಾರ ನಾಯ್ಕ ಮಾಡಿದರು. ಪ್ರಾಸ್ತವಿಕ ಭಾಷಣ ಬಿ.ವಿ. ಗಣೇಶ, ಸನ್ಮಾನಿತರ ಕುರಿತು ಸ್ಪಂದನಾ ಸ್ಫೋರ್ಡ್ಸ ಅಕಾಡೆಮಿ ಅಧಕ್ಷ ರವೀಂದ್ರ ನಾಯ್ಕ ಮಾತನಾಡಿದರು. ನಿವೃತ್ತ ಸೈನಿಕ ರಾಮು ಸಭೆಯನ್ನುದ್ದೇಶಸಿ ಮಾತನಾಡಿದರು. ವೇದಿಕೆ ಮೇಲೆ ನಗರ ಸಭೆ ಮಾಜಿ ಅಧ್ಯಕ್ಷ ಗಣಪತಿ ನಾಯ್ಕ, ಪ್ರದೀಪ ಶೆಟ್ಟಿ, ಪ್ರಾಧಿಕಾರ ಅಧ್ಯಕ್ಷ ಜಗದೀಶ ಗೌಡ, ಸೈನಿಕ ನಿವೃತ್ತ ಸಂಘದ ಅಧ್ಯಕ್ಷರು ಮುಂತಾದವರು ಉಪಸ್ಥಿತರಿದ್ದರು.
ಭವ್ಯ ಮೆರವಣಿಗೆ:
ನಗರದ ನಿಲೇಕಣಿ ಗಣಪತಿ ದೇವಾಲಯದಿಂದ ತೆರೆದ ಜೀಪಿನಲ್ಲಿ ಬೃಹತ ಬೈಕ್ ರ್ಯಾಲಿ ಜರುಗಿತ್ತು. ರ್ಯಾಲಿಯಲ್ಲಿ ವಿದ್ಯಾರ್ಥಿಗಳ ಬ್ಯಾಡ್, ಎನ್.ಸಿ.ಸಿ ಪರೇಡ್, ಪ್ರಮುಖರಾದ ರ್ಯಾಲಿ ನೇತೃತ್ವವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕಿರಣಕುಮಾರ ನಾಯ್ಕ ಮತ್ತು ಶಿರಸಿ ತಾಲೂಕು ದೈಹಿಕ ಶಿಕ್ಷಕರ ಸಂಘ ಅಧ್ಯಕ್ಷ ಬಿ.ವಿ. ಗಣೇಶ ಜಂಟಿ, ಸ್ಪಂದನಾ ಸ್ಫೋರ್ಡ್ಸ ಅಕಾಡೆಮಿ ಅಧಕ್ಷ ರವೀಂದ್ರ ನಾಯ್ಕ, ಶ್ರೀನಿವಾಸ ನಾಯ್ಕ, ವೆಂಕಟೇಶ ನಾಯ್ಕ, ದೀಪಕ ದೋಡ್ಡುರ್, ಪ್ರಾದಿಕಾರದ ಅಧ್ಯಕ್ಷ ನಾಗಭೂಷಣ ಗೌಡ, ಸೈನಿಕ ನಿವೃತ್ತ ಸಂಘದ ಅಧ್ಯಕ್ಷ ಎಮ್. ವಿ. ಹೆಗಡೆ, ಮುಂತಾದವರು ನೇತೃತ್ವ ವಹಿಸಿದರು.
ಕಾಶಿನಾಥ ಜೊತೆಯಲ್ಲಿ ತಂದೆ ಗೋವಿಂದ ನಾಯ್ಕ, ತಾಯಿ ನಾಗವೇಣಿ ನಾಯ್ಕ ಮತ್ತು ಧರ್ಮ ಪತ್ನಿ ಭಾಗವಹಿಸಿದರು.