ಶಿರಸಿ: ಉತ್ತರ ಕನ್ನಡ ಜಿಲ್ಲಾ ಚದುರಂಗ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನು ನಗರ್ ಹೊಟೆಲ್ ಸಾಮ್ರಾಟ್‌ನ ವಿನಾಯಕ ಹಾಲ್‌ನಲ್ಲಿ ಫೆಬ್ರವರಿ 2 ರಂದು ಮುಂಜಾನೆ 9 ಕ್ಕೆ ಸರಿಯಾಗಿ ಭಟ್ ಚೆಸ್ ಸ್ಕೂಲ್ ನ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಪಂದ್ಯಾವಳಿಯು ಫಿಡೆ ಸ್ವಿಸ್ ಲೀಗ್ ಮಾದರಿಯಲ್ಲಿ 20 ನಿಮಿಷ ಮತ್ತು 10 ಸೆಕೆಂಡ್ ಪ್ರತಿ ನಡೆಗೆ ಸೇರ್ಪಡೆಯಾಗಿ ಜರುಗಲಿದೆ ಮತ್ತು 7ವರ್ಷ, 9, 11, 13, 15, ಪ್ರತಿಯೊಂದು ವಯೋಮಿತಿಯ ಇಬ್ಬರು ಆಟಗಾರರನ್ನು ರಾಜ್ಯ ಚೆಸ್ ಚಾಂಪಿಯಶಿಪ್ ಗೆ ಆಯ್ಕೆ ಮಾಡಲಾಗುವದು. ಆಟಗಾರರು ತಮ್ಮ ‘ಆಧಾರ್’ ಅನ್ನು ಜನ್ಮದಿನಾಂಕ ದೃಢೀಕರಣಕ್ಕಾಗಿ ಉಪಯೋಗಿಸಬಹುದಾಗಿದೆ. ಆಸಕ್ತರು 31-1-2025 ರೊಳಗಾಗಿ 500/- ರೂ. ಪ್ರವೇಶ ಶುಲ್ಕದೊಂದಿಗೆ ತಮ್ಮ ಹೆಸರನ್ನು ನೊಂದಾಯಿಸತಕ್ಕದ್ದು. ಹೆಚ್ಚಿನ ವಿವರಗಳಿಗಾಗಿ ರಾಮಚಂದ್ರ ಭಟ್ (ಉಪಾಧ್ಯಕ್ಷರು) ಮೊ;-Tel:+919481360128 ಅಥವಾ ಆನಂದ ಸ್ವಾಮಿ ಮೊ:-Tel:+918762480128ಇವರನ್ನು ಸಂಪರ್ಕಿಸಬಹುದಾಗಿದೆ.