ಕಾರವಾರ: ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟು (ದೌರ್ಜನ್ಯ ಪ್ರತಿಬಂಧ) (ತಿದ್ದುಪಡಿ) ನಿಯಮಗಳು 2016 ರ ನಿಯಮ 17 ರಡಿ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ರಚಿಸುವ ಬಗ್ಗೆ ಅನುಸೂಚಿತ ಜಾತಿಯ 3 ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ 2 ಸೇರಿದಂತೆ ಒಟ್ಟು 5 ಜನ ಅಧಿಕಾರೇತರ ಸದಸ್ಯರು ಹಾಗೂ ಸರ್ಕಾರೇತರ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿರುವ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿಲ್ಲದ ಇತರೆ ವರ್ಗದ 3 ಜನ ಅಧಿಕಾರೇತರ ಸದಸ್ಯರನ್ನು ಅರ್ಹತೆ ಆಧಾರದ ಮೇಲೆ 3 ವರ್ಷಗಳ ಅವಧಿಗೆ ಆಯ್ಕೆ ಮಾಡುವ ಕುರಿತಂತೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತರು ಸಂಬಂಧಪಟ್ಟ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ಅರ್ಜಿಯನ್ನು ಪಡೆದು ಫೆ.10 ರೊಳಗೆ ಅರ್ಹ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದೆಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯರ ನೇಮಕ: ಅರ್ಜಿ ಆಹ್ವಾನ
![](https://euttarakannada.in/wp-content/uploads/2021/08/euk-logo-1-640x438.jpg?v=1628473623)