Slide
Slide
Slide
previous arrow
next arrow

ವಿದ್ಯಾರ್ಥಿಗಳ‌ ಏಕಾಗ್ರತೆಗೆ ಉತ್ತಮ ಆರೋಗ್ಯ ಅತ್ಯಗತ್ಯ: ಡಾ.ಮಂಜುನಾಥ

300x250 AD

ಹೊನ್ನಾವರ: ಆರೋಗ್ಯವೇ ಭಾಗ್ಯ, ವಿದ್ಯಾರ್ಥಿಯ ಏಕಾಗ್ರತೆಗೆ ಆರೋಗ್ಯವು ಅತ್ಯಗತ್ಯವಾಗಿದೆ ಎಂದು ಹೊನ್ನಾವರದ ಸರಕಾರಿ ಆರೋಗ್ಯ ಕೇಂದ್ರದ ಡಾಕ್ಟರ್ ಮಂಜುನಾಥ ಕೆ. ನುಡಿದರು.

ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸಾಮಾನ್ಯವಾಗಿ ಆರೋಗ್ಯವಂತ ವಿದ್ಯಾರ್ಥಿಗಳು ಕಲಿಕೆಯಲ್ಲಿ ಮುಂದಿರುತ್ತಾರೆ, ಬುದ್ದಿವಂತರಾಗುತ್ತಾರೆ. ವಿದ್ಯಾರ್ಥಿಗಳು ಕೈ, ಬಾಯಿ, ಮೂಗು, ಕಿವಿ ಮೊದಲಾದವುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ನುಡಿದರು. ಡಾಕ್ಟರ್ ನೇತ್ರಾವತಿ ಎಂ.ಪಿ. ಮಾತನಾಡಿ ಬಹುತೇಕ ಹೆಣ್ಣು ಮಕ್ಕಳು ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ಇದು ಇವರ ಬೆಳವಣಿಗೆಯ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರುತ್ತದೆ. ಆರೋಗ್ಯವಂತರು ದೇಶದ ಸಂಪತ್ತು ಎಂದು ನುಡಿದರು.
ಶಾಲಾ ಆಡಳಿತಾಧಿಕಾರಿ ಎಂ.ಎಸ್. ಹೆಗಡೆ ಗುಣವಂತೆ, ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್, ಶಿಕ್ಷಕಿ ರೇಷ್ಮಾ ಜೊಗಳೆಕರ್, ದೈಹಿಕ ಶಿಕ್ಷಕ ಶಂಕರ ಶಿಂಗೆ, ಆರೋಗ್ಯ ಸಿಬ್ಬಂದಿಗಳಾದ ಮಲ್ಲಿಕಾ ನಾಯ್ಕ, ಪ್ರತಿಕ್ಷಾ ಜಿ.ಕೆ. ಮೊದಲಾದವರು ಉಪಸ್ಥಿತರಿದ್ದರು. ಶಿಬಿರದಲ್ಲಿ ಮಕ್ಕಳ ಆರೋಗ್ಯವನ್ನು ಪರೀಕ್ಷಿಸಲಾಯಿತು

300x250 AD
Share This
300x250 AD
300x250 AD
300x250 AD
Back to top