Slide
Slide
Slide
previous arrow
next arrow

ತಬಲಾ ಮಾಂತ್ರಿಕ ಝಾಕೀರ್ ಹುಸೇನ್‌ಗೆ ಶ್ರದ್ಧಾಂಜಲಿ: ಮನಸೆಳೆದ ‘ಲಯವಂದನ’, ‘ಲಯ ಸರ್ಗ’

300x250 AD

ಶಿರಸಿ: ನಗರದ ಟಿ.ಆರ್.ಸಿ ಬ್ಯಾಂಕ್ ಸಭಾಭವನದಲ್ಲಿ ಪಂಡಿತ್ ಶ್ರೀಪಾದರಾವ್ ಕಲ್ಗುಂಡಿಕೊಪ್ಪ ಫೌಂಡೇಶನ್ ಹಾಗೂ ರಾಜದೀಪ ಟ್ರಸ್ಟ್ ಶಿರಸಿ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ನಿಧನರಾದ ತಬಲಾ ಮಾಂತ್ರಿಕ ಖಲಿಫಾ ಉಸ್ತಾದ್ ಝಾಕಿರ್ ಹುಸೇನ್ ಕುರಿತಾದ ಶ್ರದ್ಧಾಂಜಲಿ ಕಾರ್ಯಕ್ರಮದ “ಲಯ ವಂದನ” ಹಾಗೂ “ಲಯ ಸರ್ಗ” ಕಾರ್ಯಕ್ರಮದಲ್ಲಿ ಸಂಗೀತಾಭಿಮಾನಿಗಳು ವೈವಿದ್ಯಮಯ ತಬಲಾ ಬೋಲ್‌ಗಳಿಗೆ ತಲೆದೂಗಿ ಹರ್ಷದ ಭಾವನೆಯನ್ನು ವ್ಯಕ್ತಪಡಿಸಿದರು.

ಲಯ ವಂದನಾ ಎಂಬ ತಬಲಾ ಸೋಲೋದಲ್ಲಿ ಉಸ್ತಾದ್ ಅಲ್ಲಾರಕಾ ಖಾನ್ ಹಾಗೂ ಉಸ್ತಾದ ಝಾಕಿರ್ ಹುಸೇನ್ ಶಿಷ್ಯ ಮತ್ತು ವಾ…! ತಾಜ್ ಬೋಲಿಯೇ ಖ್ಯಾತಿಯ ಆದಿತ್ಯ ಕಲ್ಯಾಣಪುರ ರವರು ೧ ಗಂಟೆಗೂ ಮಿಕ್ಕಿ ಸುಂದರವಾಗಿ ತಬಲಾ ಸೋಲೋ ನಡೆಸಿಕೊಡುತ್ತ ಝಾಕಿರ್ ಅವರು ಪ್ರಸ್ತುತಗೊಳಿಸಿದ್ದ ವಿವಿಧ ಘರಾನಗಳ ತಬಲಾ ಬೋಲ್‌ಗಳನ್ನು ಪ್ರಸ್ತುತಗೊಳಿಸುತ್ತ ಕಿಕ್ಕಿರಿದ ಸಭೆಯನ್ನು ಮಂತ್ರ ಮುಗ್ದಗೊಳಿಸಿದರು. ತಬಲಾ ಸೋಲೋಕ್ಕೆ ಅಷ್ಟೇ ಸುಂದರವಾಗಿ ಲೆಹರಾದಲ್ಲಿ ಶಿರಸಿಯ ಅಜಯ ಹೆಗಡೆ ವರ್ಗಾಸರ ಸಾಥ್ ನೀಡಿದರು.

300x250 AD

ಇದಕ್ಕೂ ಪೂರ್ವದಲ್ಲಿ ಶ್ರದ್ಧಾಂಜಲಿ ಅಂಗವಾಗಿ ಏರ್ಪಡಿಸಲಾಗಿದ್ದ “ಲಯಸರ್ಗ”ದಲ್ಲಿ ವಿದ್ವಾನ್ ಶ್ರೇಷಾದ್ರಿ ಅಯ್ಯಂಗಾರ ಸಂಯೋಜನೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಖ್ಯಾತನಾಮ ತಬಲಾ ಕಲಾವಿದರಿಂದ ವಿಶೇಷ ತಬಲಾ ವಾದನ ಕಾರ್ಯಕ್ರಮ ಸಂಘಟಿತಗೊಂಡಿದ್ದು, ಒಟ್ಟೂ ೧೧ ತಬಲಾ ಕಲಾವಿದರು ಪಾಲ್ಗೊಂಡು ಏಕಕಾಲಕ್ಕೆ ತಬಲಾ ಬೋಲ್‌ಗಳ ರಸದೂಟ ನೀಡಿದರು.
ವಿದ್ವಾನ್ ಶೇಷಾದ್ರಿ ಅಯ್ಯಂಗಾರ, ಅನಂತ ಹೆಗಡೆ ವಾಜಗಾರ, ನಾಗಪತಿ ಹೆಗಡೆ ಕಾಗೇರಿ, ಗುರುರಾಜ ಆಡುಕಳ, ಅಕ್ಷಯ ಭಟ್ಟ ಅಂಸಳ್ಳಿ, ದಿನೇಶ ನಾಯ್ಕ, ಡಾ.ಸಚಿನ ಪಂಡಿತ, ಭರತೇಶ ಹೆಗಡೆ, ವಿನಾಯಕ ಹೆಗಡೆ ಸಾಗರ, ಮಂಜುನಾಥ ಮೋಟಿನ್ಸರ್, ಮನೋಜ ಶೇಟ್ ಈ ಹನ್ನೊಂದು ಕಲಾವಿದರು ಸೇರಿ ಆರಂಭಿಕವಾಗಿ ತೀನ್ತಾಲ್‌ನಲ್ಲಿ ಬನಾರಸ್ ಘರಾಣೆಯ ಉಠಾನ್ ನುಡಿಸುತ್ತ, ಮುಂದುವರೆದ ಭಾಗವಾಗಿ ದಿಲ್ಲಿ ಘರಾಣೆಯ ಪೇಶ್ಕಾರ್ ಕಾಯ್ದಾ, ಪಂಜಾಬ್ ಘರಾಣೆಯ ರೇಲಾ, ಅನಾಗತ್, ತುಕಡಾ, ಚಕ್ರದಾರ್, ಪರನ್, ಲಾಲಕೀಲ ಪರನ್ ನುಡಿಸುತ್ತ ಹೊಸದೊಂದು ಲೋಕವನ್ನೇ ಸೃಷ್ಟಿಸಿದ ಹಾಗೇ ಮಾಡಿ ತಮ್ಮ ತಮ್ಮ ಶ್ರದ್ಧಾಂಜಲಿ ಸಲ್ಲಿಸಿದರು. ಲೆಹರಾದಲ್ಲಿ ಅಜಯ ವರ್ಗಾಸರ ಸಹಕರಿಸಿದರು.
ಇದೇ ಸಂದರ್ಭದಲ್ಲಿ ನುಡಿನಮನವಾಗಿ ತಮ್ಮ ಮಾತಿನ ಮೂಲಕ ಖ್ಯಾತ ಗಾಯಕ ಉಸ್ತಾದ ಫಯಾಜ್ ಖಾನ್ ಬೆಂಗಳೂರು, ಪಂಡಿತ ಮೋಹನ ಹೆಗಡೆ ಹುಣಸೇಕೊಪ್ಪ, ಪ್ರೋ.ಶಂಭು ಭಟ್ಟ ಕಡತೋಕಾ, ಲಕ್ಷ್ಮೀಶ ರಾವ್ ಕಲ್ಗುಂಡಿಕೊಪ್ಪ, ದೀಪಕ ದೊಡ್ಡೂರು ಮುಂತಾದವರು ಉಸ್ತಾದ್ ಝಾಕಿರ್ ಕುರಿತಾಗಿ ಮಾತನಾಡಿದರು.
ಸರಿಸುಮಾರು ೧೫ ನಿಮಿಷಗಳ ಕಾಲ ಉಸ್ತಾದ್ ಝಾಕಿರ್ ಹುಸೇನ್ ಜೀವನ ಕುರಿತಾದ ಆಯ್ದ ದೃಶ್ಯಾವಳಿಗಳು ಪ್ರದರ್ಶಿತಗೊಂಡವು. ಸಂಪೂರ್ಣ ಕಾರ್ಯಕ್ರಮವನ್ನು ನ್ಯಾಯವಾದಿ ಸದಾನಂದ ಭಟ್ಟ ಮತ್ತು ಗಿರಿಧರ ಕಬ್ನಳ್ಳಿ ನಿರೂಪಿಸಿದರು.

Share This
300x250 AD
300x250 AD
300x250 AD
Back to top