ಕಾರವಾರ: ರಸ್ತೆ ಸುರಕ್ಷತೆ ಉಪಕ್ರಮದ ಭಾಗವಾಗಿ ಚಾಲಕ ಸಮುದಾಯದ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವುದಕ್ಕಾಗಿ ಮತ್ತು ಸಮಾಜದ ಸುರಕ್ಷತೆಗಾಗಿ ತಮ್ಮ ಧನಾತ್ಮಕ ಕೊಡುಗೆಯನ್ನು ಗೌರವಿಸಿ ಸಮಾಜವು ತಮ್ಮ ಬಗ್ಗೆ ಕಾಳಜಿವಹಿಸುತ್ತದೆ ಎಂಬ ಭರವಸೆಯನ್ನು ಚಾಲನಾ ಸಿಬ್ಬಂದಿಗಳ ಸಮುದಾಯದಲ್ಲಿ ಮೂಡಿಸಲು ಪ್ರತಿ ವರ್ಷ ಜ. 24 ರಂದು ಚಾಲನಾ ಸಿಬ್ಬಂದಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ವಾ.ಕ.ರ.ಸಾ.ಸಂಸ್ಥೆಯು ಎಲ್ಲಾ ಚಾಲಕ/ನಿರ್ವಾಹಕರಿಗೆ ತಮ್ಮ ಕರ್ತವ್ಯ ನಿರ್ವಹಣೆಯನ್ನು ಇನ್ನೂ ಉತ್ತಮಪಡಿಸಿ ಇನ್ನೂ ಹೆಚ್ಚಿನ ಜವಾಬ್ದಾರಿಯುತ ಚಾಲನೆಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಗೌರವಿಸುವ ಪರಿಕ್ರಮವನ್ನು ಹಮ್ಮಿಕೊಂಡಿದೆ.
ಪ್ರತಿ ನಿತ್ಯ ಹಗಲಿರಳು ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುತ್ತಿರುವ ಚಾಲಕರ ಕರ್ತವ್ಯಕ್ಕೆ ಕೃತಜ್ಞತೆ ಸಲ್ಲಿಸಿ ಪ್ರೋತ್ಸಾಹಿಸುವ ದೃಷ್ಟಿಯಿಂದ ಸಾರ್ವಜನಿಕರು, ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರನ್ನು ಬಸ್ ನಿಲ್ದಾಣಗಳಲ್ಲಿ ಮತ್ತು ತಮ್ಮ ಊರಿನ ಬಸ್ ತಂಗುದಾಣದಲ್ಲಿ ಹೂ ಗುಚ್ಚ ನೀಡುವ ಮೂಲಕ ಗೌರವಿಸಬಹುದಾಗಿದೆ ಎಂದು ವಾ.ಕ.ರ.ಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.24 ರಂದು ಚಾಲನಾ ಸಿಬ್ಬಂದಿಗಳ ದಿನ : ಹೂ ಗುಚ್ಚ ನೀಡಿ ಗೌರವಿಸಿ
