ಅಂಕೋಲಾ: ಶೇವ್ಕಾರದ ರಾಮಚಂದ್ರ ಉಮಾಮಹೇಶ್ವರ ಭಟ್ಟ ಮೇಲಿನಪಾಲ್ ಎಂಬುವವರ ಮನೆಯ ಅಂಗಳಕ್ಕೆ ಸೋಮವಾರ ರಾತ್ರಿ 11:20 ಕ್ಕೆ ಚಿರತೆಯೊಂದು ನಾಯಿಯನ್ನು ಹಿಡಿಯುವ ವಿಫಲ ಯತ್ನ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಮನೆಯ ಮುಂಭಾಗದ ಗೇಟ್ ಸಂದಿಯಿಂದ ನೇರವಾಗಿ ಮನೆಯಂಗಳಕ್ಕೆ ಬಂದ ಚಿರತೆಯು ಮನೆಯವರು ಸಾಕಿದ ನಾಯಿಯನ್ನು ಹಿಡಿದು ಓಡಲು ಪ್ರಯತ್ನಿಸಿತು, ಅಷ್ಟರೊಳಗೆ ಮನೆಯವರು ಎಚ್ಚೆತ್ತುಕೊಂಡಾಗ ಚಿರತೆ ನಾಯಿಯನ್ನು ಬಿಟ್ಟು ಪರಾರಿಯಾಗಿದೆ. ಚಿರತೆ ಪರಚಿರುವ ಕಾರಣ ನಾಯಿಗೆ ಅನೇಕ ಗಾಯಗಳಾಗಿದ್ದು ಸದ್ಯ ನಾಯಿಯು ಪ್ರಾಣಾಪಾಯದಿಂದ ಪಾರಾಗಿದ್ದು ಮುಂದೇನಾಗಬಹುದು ಎಂಬ ಆತಂಕದಲ್ಲಿ ಮನೆಯವರಿದ್ದಾರೆ. ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.