ಕಾರವಾರ: ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟಿಡ್ನ ಟ್ರೈನಿಂಗ್ ಸಂಸ್ಥೆಯಲ್ಲಿ (ಎಚ್ಎಎಲ್) ಫಿಟ್ಟರ್, ಟರ್ನರ್, ಮಶಿನಿಷ್ಟ, ಕಂಪ್ಯೂಟರ್, ಮತ್ತು ಪ್ರೋಗ್ರಾಮಿಂಗ್ ಅಸಿಸ್ಟಂಟ್, ಕಾರ್ಪೆಟರ್, ಫೌಡ್ರಿಮ್ಯಾನ್ ಶೀಟ್ಮೆಟಲ್ ವರ್ಕರ್, ಟೂಲ್ ಮತ್ತು ಡೈ ಮೇಕರ್ ಸಿಎನ್ಸಿ ಪ್ರೊಗ್ರಾಮ್ ಕಂ ಆಪರೇಟರ್, ಮೈಕ್ಯಾನಿಕ್ ರೆಫ್ರಿಜರೇಟರ್ ಮತ್ತು ಏರ್ ಕಂಶನಿಂಗ್ ಟ್ರೇಡ್ಗಳಲ್ಲಿ ಕರ್ನಾಟಕ ರಾಜ್ಯದ ಮಾನ್ಯತೆ ಪಡೆದ ಐ.ಟಿ.ಐಗಳಿಂದ ಕ್ರಾಫ್ಟ್ಸ್ಮೆನ್ ಟ್ರೈನಿಂಗ್ ಸ್ಕೀಮ್ (ಸಿಟಿಸಿ) ತೇರ್ಗಡೆಯಾದ ಅರ್ಹ ಆಭ್ಯಥಿಗಳಿಂದ ಒಂದು ವರ್ಷದ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಆಭ್ಯರ್ಥಿಗಳು ಮೊದಲು https://apprenticeshipoindia.gov.in ಪೋರ್ಟಲ್ನಲ್ಲಿ ನೋಂದಣಿ ಮಾಡಿ ಅಪ್ರೆಂಟಿಸ್ ನೋಂದಣಿ ಸಂಖ್ಯೆಯೊಂದಿಗೆ ಉದ್ಯೋಗ ವಿನಿಮಯ ಕಚೇರಿಗೆ ಖುದ್ದಾಗಿ ಬೇಟಿ ನೀಡಿ, ನಿಗದಿತ ನಮೂನೆಯ ಅರ್ಜಿಯನ್ನು ಪಡೆದು, ಭರ್ತಿ ಮಾಡಿ ಸ್ವದೃಢಿಕೃತ ಎಸ್ ಎಸ್.ಎಲ್.ಸಿ ಅಂಕಪಟ್ಟಿ ಮತ್ತು ರಾಷ್ಟ್ರೀಯ ವೃತ್ತಿ ತರಬೇತಿ ಕೌನ್ಸಿಲ್ನಿಂದ ಅಂಗೀಕೃತವಾದ ಸಂಸ್ಥೆಯಿAದ ಪಡೆದ ಐ.ಟಿ.ಐ, ಎನ್.ಸಿ.ವಿ.ಟಿ ಪ್ರಮಾಣ ಪತ್ರ ಮತ್ತು ಅಂಕಪಟ್ಟಿಗಳು, ಇತರೆ ಜಾತಿ ಪ್ರಮಾಣ ಪತ್ರ, ಪಿ.ಎಚ್, ಆರ್ಮಡ, ಆಧಾರ್ ಕಾರ್ಡ್ ಪ್ರತಿ, ಪಾನಕಾರ್ಡ್ ಪ್ರತಿ, ಆನ್ಲೈನ್ ಅಪ್ರೆಂಟಿಸ್ ನೋಂದಾಣಿ ಪ್ರತಿ ಹಾಗೂ ಇತ್ತೀಚಿನ ಎರಡು ಪಾಸ್ಫೋಟೋಗಳೊಂದಿಗೆ ಜ. 21 ರೊಳಗಾಗಿ ಉದ್ಯೋಗ ವಿನಿಮಯ ಕಚೇರಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ:Tel:+9108382226386ಹಾಗೂTel:+919743360656 ನ್ನು ಸಂಪರ್ಕಿಸುವAತೆ ಯೋಜನಾ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.