ಸಿದ್ದಾಪುರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಜಿಪಂ, ತಾಪಂ ಇವುಗಳ ಆಶ್ರಯದಲ್ಲಿ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟಗಳು ಸಿದ್ದಾಪುರ ಇವರು ಆಯೋಜಿಸಿದ್ದ ಸಂಜೀವಿನಿ ಮಾಸಿಕ ಸಂತೆ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯ ಸಭಾಂಗಣದಲ್ಲಿ ಸೋಮವಾರ ನಡೆಯಿತು. ಹಾರ್ಸಿಕಟ್ಟಾ ಸಂಜೀವಿನಿ ಒಕ್ಕುಟದ ವಿವಿಧ ಸಂಘದವರು ತಾವು ಮನೆಯಲ್ಲಿ ಬೆಳೆದ ತರಕಾರಿಗಳನ್ನು ಹಾಗೂ ಮನೆಯಲ್ಲಿಯೇ ತಯಾರಿಸಿದ ತಿಂಡಿ-ತಿನಿಸುಗಳನ್ನು ಪ್ರದರ್ಶಿಸಿ ಮಾರಾಟ ಮಾಡಿದರು.
ಸಂಜೀವಿನಿ ಮಾಸಿಕ ಸಂತೆ ಯಶಸ್ವಿ
