ಭಟ್ಕಳ:ಹಾಲು ಉತ್ಪಾದಕರ ಸಹಕಾರಿ ಸಂಘ,ಹಸ್ರವಳ್ಳಿ, ತಾಲೂಕ ಕೃಷಿಕ ಸಮಾಜ ಭಟ್ಕಳ,ಅಮೀನ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘ ಮಾರುಕೇರಿ, ಕ್ಯಾಂಪ್ಕೊ ಲಿಮಿಟೆಡ್ ಮಂಗಳೂರು ಮತ್ತು ಕೃಷಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಅಡಿಕೆ ಬೆಳೆಯಲ್ಲಿ ಎಲೆಚುಕ್ಕೆ ರೋಗ ನಿಯಂತ್ರಣ, ಹೈನು ರಾಸು ನಿರ್ವಹಣೆ ಮತ್ತು ಸಮಗ್ರ ಕೃಷಿ ಪದ್ದತಿ ವಿಚರ ಸಂಕೀರ್ಣವನ್ನು ಇಲ್ಲಿನ ಹಸ್ರವಳ್ಳಿ ಗಣೇಶ ಸಭಾಭವನ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಧಾರವಾಡ ಹಾಲು ಒಕ್ಕೂಟ ನಿರ್ದೇಶಕರಾದ ಪರಶುರಾಮ ವಿ. ನಾಯ್ಕ ಉದ್ಘಾಟಿಸಿದರು. ನಂತರ ಮಾತನಾಡಿ ಒಕ್ಕೂಟದಿಂದ ರೈತರಿಗೆ ಸಿಗುವ ಸೌಲಭ್ಯ ಕುರಿತು,ರೈತರು ಸೌಲಭ್ಯ ಉಪಯೋಗಿಸಿಕೊಂಡು ಹೆಚ್ಚಿನ ಹಾಲು ಉತ್ಪಾದನೆ ಮಾಡುವಂತೆ ಸೂಚಿಸಿದರು.
ಕೇರಳ ಕಾಸಗೋಡ ,CPIRI, ವಿಜ್ಞಾನಿ ಯಾದ ವಿನಾಯಕ ಹೆಗಡೆ ಮಾತನಾಡಿ ಪ್ರಸ್ತುತ ಅಡಿಕೆ ಬೆಳೆಯಲ್ಲಿ ಬಾಧಿಸುತ್ತಿರುವ ಎಲೆ ಚುಕ್ಕೆ ರೋಗದ ಲಕ್ಷಣಗಳು ನಿವಾರಣೆ ಉಪಾಯಗಳು ಹಾಗೂ ಸಮಗ್ರ ಕೃಷಿ ಪದ್ಧತಿ ಕುರಿತು ಮಾಹಿತಿ ನೀಡಿದರು.
KMF ಪಶು ವೈದ್ಯ ರಾದ ಡಾ: ವಿನಾಯಕ ಬಿರಾದಾರ ರಾಸುಗಳ ನಿರ್ವಹಣೆ, ರಾಸುಗಳಲ್ಲಿ ಕಂಡುಬರುವ ರೋಗಗಳು,ಅವುಗಳ ನಿಯಂತ್ರಣ, ಸಮತೋಲನದ ಆಹಾರ ನೀಡುವಿಕೆ ಕುರಿತು ಮಾಹಿತಿ ನೀಡಿದರು.
ಕೃಷಿ ಇಲಾಖೆ ಯೋಜನೆ ಕುರಿತು ಜಿ.ಎಂ.ಹೆಗಡೆ ಮಾಹಿತಿ ನೀಡಿದರು. ಹಾಲು ಉತ್ಪಾದಕರ ಸಹಕಾರಿ ಸಂಘದ ನಾಗರಾಜ ನಾಯ್ಕ,ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಡಾ. ಸುಧಾಕರ ಭಟ್ಟ ಬೆಳೆಗಾರರ ಸಮಸ್ಯೆಗಳ ಬಗ್ಗೆ ಮಾತನಾಡಿದರು,ಕೃಷಿ ಸಮಾಜದ ಅಧ್ಯಕ್ಷರಾದ ಶ್ರೀಧರ್ ಹೆಬ್ಬಾರ,ಮಾತನಾಡಿದರು.
ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಂಘದ ಉಫಾದ್ಯಕ್ಷ ನಾಗರಾಜ್ ಎನ್ ನಾಯ್ಕ ಅಗ್ಗ, ಮಾರ್ಗದ ವಿಸ್ತರಣಾಧಿರಿ ವಿನಾಯಕ ನಾಯ್ಕ,
ಮುಂತಾದವರು ಉಪಸ್ಥಿತರಿದ್ದರು. ಈಶ್ವರ ನಾಯ್ಕ ಹಸ್ರವಳ್ಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು