ಶಿರಸಿ: ಸ್ವರ ಸಾಮ್ರಾಟ ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ನಿಂದ ಜ.5ರಂದು ಭಾನುವಾರ ಸಂಜೆ ನಗರದ ಟಿಎಮ್.ಎಸ್. ಸಭಾಭವನದಲ್ಲಿ ಸಂಗೀತೋತ್ಸವ, ರಾಷ್ಟ್ರೀಯ ಪ್ರಶಸ್ತಿ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್ನ ನಿಜಗುಣ ರಾಜಗುರು ಹೇಳಿದರು.
ಅವರು ಬುಧವಾರ ನಗರದ ಸಾಮ್ರಾಟ್ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ, ಪಂ.ಬಸವರಾಜ ರಾಜಗುರು ಅವರ ಬದುಕಿನ ವೃತ್ತಾಂತದ ‘ನಾ ರಾಜಗುರು’ ಸಂಗೀತ ನಾಟಕ ನಡೆಯಲಿದೆ. ಪಂ. ಗಣಪತಿ ಭಟ್ ಹಾಸಣಗಿ , ವಿದುಷಿ ಮೇಧಾ ಭಟ್ ಗಾಯನವಿದ್ದು, ವಿಶ್ವರಾಜ ನಿಜಗುಣ ಅವರಿಂದ ಏಕ ಪಾತ್ರಾಭಿನಯ ನಡೆಯಲಿದೆ ಎಂದರು.