Slide
previous arrow
next arrow

ಬಾವಿಗೆ ಬಿದ್ದ ಬಾಲಕನ ಸಾವಿಗೆ ಶಿಕ್ಷಕರ ನಿರ್ಲಕ್ಷ್ಯವೇ ಕಾರಣ: ಕುಟುಂಬಸ್ಥರಿಂದ ಪ್ರತಿಭಟನೆ

300x250 AD

ಭಟ್ಕಳ : ಕೊಪ್ಪಳ  ಜಿಲ್ಲೆಯ ಯಲಬುರ್ಗಾ ತಾಲೂಕಿನ ಗಾಣದಾಳದ ವಿದ್ಯಾರ್ಥಿ ಬಾವಿಗೆ ಬಿದ್ದು ಮೃತಪಟ್ಟ ಘಟನೆಗೆ ಶಿಕ್ಷಕರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮೃತ ಬಾಲಕನ ಸಂಬಂಧಿಕರು ಗುರುವಾರ ಪ್ರತಿಭಟನೆ ನಡೆಸಿದರು.

ಯಲಬುರ್ಗಾ ತಾಲೂಕಿನ ಗಾಣದಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ೮ನೇ ತರಗತಿ ವಿದ್ಯಾರ್ಥಿ ನಿರುಪಾದಿ ದುರ್ಗಪ್ಪ ಹರಿಜನ (೧೪) ಮೃತಪಟ್ಟ ಸುದ್ದಿ ಕೇಳಿ ಆತನ ಸಂಬಂಧಿಕರು ಭಟ್ಕಳಕ್ಕೆ ಆಗಮಿಸಿದರು. ಬಾಲಕ ಮೃತಪಟ್ಟ ಸ್ಥಳ ವೀಕ್ಷಿಸಿದ ಸಂಬಂಧಿಕರು ದಿಢೀ‌ರ್ ಆಗಿ ಪ್ರತಿಭಟನೆ  ನಡೆಸಿದರು. ಬಾಲಕನ ಸಾವಿಗೆ ಶಿಕ್ಷಕರೇ ಕಾರಣ. ಕಳೆದ ವಾರವಷ್ಟೇ ಮುರ್ಡೇಶ್ವರದಲ್ಲಿ ನಾಲ್ವರು ವಿದ್ಯಾರ್ಥಿನಿಯರು ಮೃತಪಟ್ಟ ಹಿನ್ನೆಲೆಯಲ್ಲಿ ಪ್ರವಾಸ ಬೇಡವೆಂದರೂ ಮಕ್ಕಳನ್ನು ಕರೆದುಕೊಂಡು ಬಂದಿದ್ದಾರೆ. ಪ್ರತಿ ೭ ಮಕ್ಕಳಿಗೆ ಒಬ್ಬ ಶಿಕ್ಷಕರಿರುತ್ತಾರೆ ಎಂದು ನಮ್ಮನ್ನು ಮನವೊಲಿಸಿದ್ದಾರೆ. ಆದರೆ ಶಿಕ್ಷಕರ ತಾರತಮ್ಯ ನೀತಿಯಿಂದ ದಲಿತ ಬಾಲಕ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿದರು. ತಪ್ಪಿತಸ್ಥ ಶಿಕ್ಷಕರನ್ನು ಸ್ಥಳಕ್ಕೆ ಕರೆದುಕೊಂಡು ಬರುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಈ ವೇಳೆ ಸ್ಥಳದಲ್ಲೇ ಇದ್ದ ತಹಸೀಲ್ದಾರ ನಾಗೇಂದ್ರ ಶೆಟ್ಟಿ, ಶಹರ ಠಾಣೆ ಪಿಐ ಗೋಪಿಕೃಷ್ಣ ಈ ಘಟನೆ ಬಗ್ಗೆ  ದೂರು ಕೊಡಿ, ಪ್ರತಿಭಟನೆ ಬೇಡ ಎಂದು ಪೊಲೀಸರು ಮನವೊಲಿಸಲು ಪ್ರಯತ್ನಿಸಿದರೂ ಸಂಬಂಧಿಕರು ಪಟ್ಟು ಸಡಿಲಿಸಲಿಲ್ಲ. ಕೊನೆಗೆ ಅವರನ್ನು ಅಲ್ಲಿಂದ ಮೃತದೇಹ ಇರುವ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಯಶಸ್ವಿಯಾದರು. ಅಲ್ಲಿಯೂ ಪ್ರತಿಭಟನೆ ಮುಂದುವರಿಸಿದ ಸಂಬಂಧಿಕರು, ಶಿಕ್ಷಕರನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು. ಕೊನೆಗೂ ಆಕ್ರೋಶಿತರನ್ನು ಮನವೊಲಿಸಲು ಪೊಲೀಸರು ಯಶಸ್ವಿಯಾಗಿ ಕುಟುಂಬಸ್ಥರಿಂದ ದೂರನ್ನು ಸ್ವೀಕರಿಸಿದರು. ಬಳಿಕ ಮೃತ ವಿದ್ಯಾರ್ಥಿಯ ಮರಣೋತ್ತರ ಪರೀಕ್ಷೆ ನಡೆಸಿದ ತಾಲೂಕಾ ಆಡಳಿತ ಮೃತ ದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಿದರು.

300x250 AD

ಇದಕ್ಕೂ ಪೂರ್ವದಲ್ಲಿ ಕುಟುಂಬಸ್ಥರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯಕ್ಕೆ ಭೇಟಿ ನೀಡಿ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳ ಜೊತೆಗೆ ಮಾತುಕತೆ ನಡೆಸಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು ಈ ವೇಳೆ ಸ್ಥಳದಲ್ಲಿ ಭಟ್ಕಳ ಡಿವೈಎಸ್ಪಿ ಮಹೇಶ ಕೆ. ಹಾಗೂ ಇಲಾಖೆ ಸಿಬ್ಬಂದಿಗಳು ಇದ್ದರು

Share This
300x250 AD
300x250 AD
300x250 AD
Back to top